×
Ad

ಮಂಜುಕವಿದ ವಾತಾವರಣ: 25 ನಿಮಿಷ ಆಗಸದಲ್ಲಿ ಸುತ್ತಾಡಿದ ಮುಂಬೈ-ಹುಬ್ಬಳ್ಳಿ ಇಂಡಿಗೋ ವಿಮಾನ

Update: 2020-10-08 21:27 IST

ಹುಬ್ಬಳ್ಳಿ, ಅ.8: ಗುರುವಾರ ಬೆಳಗ್ಗೆ ಮಂಜು ಮುಸುಕಿದ ವಾತಾವರಣವಿದ್ದ ಪರಿಣಾಮ ಮುಂಬೈ-ಹುಬ್ಬಳ್ಳಿ ಇಂಡಿಗೋ ವಿಮಾನ ಸುಮಾರು 25 ನಿಮಿಷ ಆಕಾಶದಲ್ಲಿ ಸುತ್ತಾಡಿ, ನಂತರ ಸುರಕ್ಷಿತವಾಗಿ ಲ್ಯಾಂಡ್ ಆಗಿರುವ ಘಟನೆ ನಗರದಲ್ಲಿ ನಡೆದಿದೆ.

ಮುಂಬೈನಿಂದ ಗುರುವಾರ ಬೆಳಗ್ಗೆ 8 ಗಂಟೆಗೆ 65 ಪ್ರಯಾಣಿಕರೊಂದಿಗೆ ಸರಿಯಾದ ಸಮಯಕ್ಕೆ ಹುಬ್ಬಳ್ಳಿ ನಗರಕ್ಕೆ ಆಗಮಿಸಿದ ಇಂಡಿಗೋ ವಿಮಾನ, ಸುಮಾರು 4 ಕಿಮೀ ಅಂತರದಲ್ಲಿ ಮಂಜಿನ ವಾತಾವರಣ ಇದ್ದ ಕಾರಣ, ಸುಮಾರು 25 ನಿಮಿಷ ಆಕಾಶದಲ್ಲಿ ಸುತ್ತಾಡಿತು. 

ನಂತರ ಮಂಜು ತಿಳಿಯಾದ ಮೇಲೆ ಎಟಿಸಿ ಸಿಗ್ನಲ್ ದೊರೆತ ಕೂಡಲೇ 8:23ರ ವೇಳೆಗೆ ಸುರಕ್ಷಿತವಾಗಿ ರನ್ ವೇಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News