ಇನ್ನೊಂದು ವಾರದಲ್ಲಿ ಶಾಲೆ ಆರಂಭ ಸಂಬಂಧ ಎಸ್‍ಒಪಿ ತಯಾರಿಕೆ

Update: 2020-10-09 17:21 GMT

ಬೆಂಗಳೂರು, ಅ.9: ರಾಜ್ಯದ ಆರೋಗ್ಯ ಇಲಾಖೆ ಜತೆಗೆ ಶಿಕ್ಷಣ ಇಲಾಖೆ ಎಸ್‍ಒಪಿ (ಗುಣಮಟ್ಟ ಕಾರ್ಯನಿರ್ವಹಣೆ ಶಿಷ್ಟಾಚಾರ) ಸಿದ್ಧಪಡಿಸುತ್ತಿದೆ. ಶಾಲೆ ಪುನಾರಂಭಕ್ಕೆ ಶಿಕ್ಷಣ ಇಲಾಖೆಯಿಂದ ಇನ್ನೊಂದು ವಾರದಲ್ಲಿ ಎಸ್‍ಒಪಿ ತಯಾರಿ ಆಗಲಿದ್ದು, ಬಳಿಕ ಇಲಾಖೆ ಸರಕಾರಕ್ಕೆ ವರದಿ ಸಲ್ಲಿಸಲಿದೆ.

ರಾಜ್ಯದಲ್ಲಿ ಸದ್ಯ ಶಾಲಾ-ಕಾಲೇಜು ಆರಂಭದ ಕುರಿತು ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಕೇಂದ್ರ ಸರಕಾರ ಅಕ್ಟೋಬರ್ 15ರ ನಂತರ ಶಾಲಾ-ಕಾಲೇಜು ಆರಂಭಿಸಬಹುದು ಎಂದು ತಿಳಿಸಿದೆ. ಆದರೆ, ಇತ್ತ ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಶಾಲೆ ಆರಂಭಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ಈ ಮಧ್ಯೆ ಕೇಂದ್ರ ಸರಕಾರ ಎಸ್‍ಒಪಿ ಜಾರಿ ಮಾಡಿದ್ದು, ಇದೀಗ ರಾಜ್ಯದ ಆರೋಗ್ಯ ಇಲಾಖೆ ಜತೆಗೆ ಶಿಕ್ಷಣ ಇಲಾಖೆ ಎಸ್‍ಒಪಿ ಸಿದ್ಧಪಡಿಸುತ್ತಿದೆ. ಶಾಲೆ ಪುನಾರಂಭಕ್ಕೆ ಇಲಾಖೆಯಿಂದ ಇನ್ನೊಂದು ವಾರದಲ್ಲಿ ಎಸ್‍ಒಪಿ ತಯಾರಿ ಆಗಲಿದ್ದು ಬಳಿಕ ಸರಕಾರಕ್ಕೆ ವರದಿ ಸಲ್ಲಿಸಲಿದೆ.

ಈ ಬಗ್ಗೆ ಮಾತಾನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬು ಕುಮಾರ್, ಇನ್ನೊಂದು ವಾರದಲ್ಲಿ ಶಿಕ್ಷಣ ಇಲಾಖೆಯಿಂದ ಎಸ್‍ಒಪಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗುತ್ತದೆ. ಆರೋಗ್ಯ ಇಲಾಖೆಯಿಂದಲೂ ಎಸ್‍ಒಪಿ ಬರಬೇಕಿದೆ. ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ವರದಿ ನೀಡಲಾಗುತ್ತದೆ. ಬಳಿಕ ಶಿಕ್ಷಣ ಸಚಿವರು ಹಾಗೂ ಸರಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News