ಮೈಸೂರಿನಲ್ಲಿಂದು 541 ಮಂದಿಗೆ ಕೊರೋನ ಪಾಸಿಟಿವ್: 11 ಮಂದಿ ಸಾವು

Update: 2020-10-11 17:13 GMT

ಮೈಸೂರು,ಅ.11: ಮೈಸೂರಿನಲ್ಲಿ ದಿನೇ ದಿನೇ ಕೊರೋನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂದು ಮೈಸೂರಿನಲ್ಲಿ 541 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 11 ಮಂದಿ ಸಾವನ್ನಪ್ಪಿದ್ದಾರೆ.

ಇದುವರೆಗೆ ಕೊರೋನ ಸೋಂಕಿನ ಪ್ರಕರಣಗಳು 42,064ಕ್ಕೆ ಏರಿದಂತಾಗಿದೆ. ಇಂದು 331 ಕೊರೋನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಇದುವರೆಗೆ 33,639 ಮಂದಿ ಗುಣಮುಖರಾದಂತಾಗಿದೆ.

ಸದ್ಯ 7549 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ 886 ಮಂದಿ ಕೊರೋನ ಸೋಂಕಿತರು ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News