×
Ad

ವ್ಯಕ್ತಿಯ ಕೊಲೆ ಪ್ರಕರಣ: ಕ್ರಷರ್ ಮಾಲಕ ಸೇರಿ ಹಲವರ ಬಂಧನ

Update: 2020-10-11 23:52 IST

ಮಂಡ್ಯ, ಅ.11: ವ್ಯಕ್ತಿಯ ಕೊಲೆ ಮಾಡಿದ್ದ ನಾಲ್ಕು ಮಂದಿ ಸುಪಾರಿ ಕಿಲ್ಲರ್ಸ್ ಹಾಗು ಸುಪಾರಿ ಕೊಟ್ಟಿದ್ದ ಕ್ರಷರ್ ಮಾಲಕನನ್ನು ಶ್ರೀರಂಗಪಟ್ಟಣ ಪೊಲೀಸರು ಬಂಧಿಸಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಗ್ರಾಮದ ವಿಜಯಕುಮಾರ್, ಚಂದ್ರಶೇಖರ, ತೂಬಿನಕೆರೆಯ ಶ್ರೀನಿವಾಸ, ನಾಗಮಂಗಲ ತಾಲೂಕು ಹೂವಿನಹಳ್ಳಿಯ ಅಭಿಷೇಕ್ ಹಾಗೂ ಕ್ರಷರ್ ಮಾಲಕ ಜಕ್ಕನಹಳ್ಳಿಯ ಮಂಜುನಾಥ್ ಬಂಧಿತರು.

ಜಕ್ಕನಹಳ್ಳಿಯ ಪೂರ್ಣಚಂದ್ರ ಎಂಬಾತನನ್ನು ಕಳೆದ ಅ.2ರಂದು ಗಣಂಗೂರು ಬಳಿಯ ಯೂಗನರಸಿಂಹ ಕ್ರಷರ್ ಕೊಠಡಿಯಲ್ಲಿ ಕೊಲೆ ಮಾಡಲಾಗಿತ್ತು.

ಶ್ರೀರಂಗಪಟ್ಟಣ ಸಿಪಿಐ ಯೋಗೇಶ್, ಪಿಎಸ್ಸೈ ಗಿರೀಶ್ ನೇತೃತ್ವದ  ತಂಡ ಆರೋಪಿಗಳನ್ನು ಕೆ.ಆರ್.ನಗರ ತಾಲೂಕು ಸಾಲಿಗ್ರಾಮದಲ್ಲಿ ಬಂಧಿಸಿ ವಿಚಾರಣೆ ಮಾಡಿದಾಗ ಆರೋಪಿಗಳು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಪರಶುರಾಮ ತಿಳಿಸಿದ್ದಾರೆ.

ಕ್ರಷರ್ ಮಾಲಕ ಮಂಜುನಾಥ್, ಕೊಲೆಯಾದ ಪೂರ್ಣಚಂದ್ರ ನ ಚಿಕ್ಕಪ್ಪ ನಾಗೇಶನ ಕೊಲೆ ಆರೋಪಿಯಾಗಿದ್ದು, ಈ ಹಿನ್ನೆಲೆಯಲ್ಲಿ ಪೂರ್ಣಚಂದ್ರನಿಗೂ ಮಂಜುನಾಥ್ ನಡುವೆ ದ್ವೇಷವಿತ್ತು ಎನ್ನಲಾಗಿದೆ. ಈ ಕಾರಣಕ್ಕೆ ಮಂಜುನಾಥ್ ಪೂರ್ಣಚಂದ್ರನ ಕೊಲೆಗೆ ಸುಪಾರಿ ಕೊಟ್ಟಿದ್ದ. ಜತೆಗೆ ಕೊಲೆ ಸೇರಿದಂತೆ ಹಲವು ಪ್ರಕರಣಗಳು ಮಂಜುನಾಥ್ ಮೇಲಿವೆ ಎಂದು ಎಸ್ಪಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News