ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಮಹಿಳೆಯ ಶವ ಪತ್ತೆ
Update: 2020-10-12 17:34 IST
ಕಲಬುರಗಿ, ಅ.12: ಹಳ್ಳ ದಾಟಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಮಹಿಳೆ ಕಮಲಾಪುರ ತಾಲೂಕಿನ ಮರಗುತ್ತಿ ತಾಂಡಾ ಬಳಿ ಶವವಾಗಿ ಪತ್ತೆಯಾಗಿದ್ದಾರೆ.
ಮರಗುತ್ತಿ ತಾಂಡಾ ನಿವಾಸಿ ಶಾಂತಾಬಾಯಿ(40) ಮೃತ ಮಹಿಳೆ. ಶಾಂತಾಬಾಯಿ ರವಿವಾರ ಸಂಜೆ ಹಣ್ಣು ತರಲು ಬೆಟ್ಟಕ್ಕೆ ಹೋಗಿದ್ದರು. ವಾಪಾಸ್ ಮನೆಗೆ ಬರುವಾಗ ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಯತ್ನಿಸಿದ್ದಾರೆ. ಈ ವೇಳೆ ಆಯತಪ್ಪಿ ನೀರಿನಲ್ಲಿ ಬಿದ್ದುಕೊಚ್ಚಿ ಹೋಗಿದ್ದು, ಸೋಮವಾರ ಮರಗುತ್ತಿ ತಾಂಡಾ ಬಳಿ ಮರದಲ್ಲಿ ನೇತಾಡುವ ರೀತಿ ಶವ ಪತ್ತೆಯಾಗಿದೆ.
ಕಮಲಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.