ಬೆಳಗಾವಿಯಲ್ಲಿ ಹವಾಮಾನ ವೈಪರೀತ್ಯ: ಹುಬ್ಬಳ್ಳಿಯಲ್ಲಿ ಇಳಿದ ಇಂಡಿಗೊ ವಿಮಾನ

Update: 2020-10-12 12:10 GMT
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ, ಅ.12: ಮಂಜು ಹೆಚ್ಚಿನ ಪ್ರಮಾಣದಲ್ಲಿ ಇದ್ದಿದ್ದರಿಂದ ಹಾಗೂ ಹವಾಮಾನ ವೈಪರೀತ್ಯದ ಕಾರಣಕ್ಕೆ ಬೆಳಗಾವಿಯಲ್ಲಿ ಸೋಮವಾರ ಬೆಳಗ್ಗೆ ಇಳಿಯಬೇಕಿದ್ದ ಇಂಡಿಗೊ ಸಂಸ್ಥೆ ವಿಮಾನ ಹುಬ್ಬಳ್ಳಿಯಲ್ಲಿ ಇಳಿದಿದೆ. 

ಈ ವಿಮಾನ ಹೈದರಾಬಾದ್‍ನಿಂದ ಹೊರಟಿತ್ತು. ನಿಗದಿಯಂತೆ ಬೆಳಗಾವಿಯಲ್ಲಿ ಲ್ಯಾಂಡ್ ಮಾಡಲು ಪೈಲಟ್ ಪ್ರಯತ್ನಿಸಿದ್ದರು. ಆದರೆ, ಮಂಜು ಹೆಚ್ಚಿನ ಪ್ರಮಾಣದಲ್ಲಿ ಇದ್ದಿದ್ದರಿಂದ ಹಾಗೂ ಹವಾಮಾನ ವೈಪರೀತ್ಯದ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಿದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ್‍ ಕುಮಾರ ಠಾಕರೆ ತಿಳಿಸಿದ್ದಾರೆ. ಪ್ರಯಾಣಿಕರು ಬಸ್ ಮೂಲಕ ಬೆಳಗಾವಿಗೆ ತೆರಳಿದ್ದಾರೆ.

ನಿರ್ದೇಶಕರ ಹೇಳಿಕೆ: ಬೆಳಗಾವಿಯಲ್ಲಿ ಲ್ಯಾಂಡ್ ಆಗಬೇಕಿದ್ದ ಟ್ರೂಜೆಟ್ ಕಂಪೆನಿಯ ವಿಮಾನ ತಿರುಪತಿಯಲ್ಲಿ, ಸ್ಪೈಸ್ ಜೆಟ್ ವಿಮಾನವನ್ನು ಹೈದರಾಬಾದ್‍ನಲ್ಲಿ ಹಾಗೂ ಇಂಡಿಗೊ ಕಂಪೆನಿಯ ವಿಮಾನವನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ. ಹವಾಮಾನ ವೈಪರೀತ್ಯದ ಕಾರಣಕ್ಕೆ ಇಲ್ಲಿ ಲ್ಯಾಂಡ್ ಮಾಡಲಾಗಿದೆ ಎಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶ್‍ಕುಮಾರ್ ಮೌರ್ಯ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News