×
Ad

ಗರ್ಭಿಣಿಗೆ ತಾನೇ ಹೆರಿಗೆ ಮಾಡಿಸಿದ ಆಂಬ್ಯುಲೆನ್ಸ್ ಚಾಲಕ

Update: 2020-10-12 21:53 IST
ಸಾಂದರ್ಭಿಕ ಚಿತ್ರ

ಧಾರವಾಡ, ಅ.12: ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಗರ್ಭಿಣಿಗೆ ಹೆರಿಗೆ ನೋವು ಹೆಚ್ಚಾದ ಕಾರಣ 108ರ ಚಾಲಕ ತಾನೇ ಹೆರಿಗೆ ಮಾಡಿಸಿದ ಘಟನೆ ಧಾರವಾಡ ತಾಲೂಕಿನ ಮುಗದ ಗ್ರಾಮದ ಬಳಿ ನಡೆದಿದೆ.

ಲೋಕೇಶ್ ಹೆರಿಗೆ ಮಾಡಿಸಿದ ಆಂಬ್ಯುಲೆನ್ಸ್ ಚಾಲಕ. ರಿಜ್ವಾನಾ ಕಾಸಿಂ ಬೆಟಗೇರಿ ಎಂಬವರನ್ನು ಹೆರಿಗೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆ ಆಕೆಗೆ ಅಪಾರವಾದ ಹೆರಿಗೆ ನೋವು ಕಾಣಿಸಿಕೊಂಡಿದೆ.

ಈ ವೇಳೆ ಬೇರೆ ದಾರಿ ಇಲ್ಲದೇ 108 ರ ಚಾಲಕನೇ ಆಕೆಗೆ ಹೆರಿಗೆ ಮಾಡಿಸಿದ್ದು, ರಿಜ್ವಾನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಮಗು ಇಬ್ಬರೂ ಕ್ಷೇಮವಾಗಿದ್ದು, ಇಬ್ಬರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News