ಕರ್ನಾಟಕ ಸಂಸ್ಕೃತ ವಿವಿ ಕುಲಪತಿಯಾಗಿ ದೇವನಾಥನ್ ನೇಮಕ
Update: 2020-10-12 22:36 IST
ಬೆಂಗಳೂರು, ಅ.12: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಯಾಗಿ ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ವಿಶಿಷ್ಟಾದ್ವೈತ ವೇದಾಂತದ ಪ್ರೊಫೆಸರ್ ದೇವನಾಥನ್ ನೇಮಕಗೊಂಡಿದ್ದಾರೆ.
ಕುಲಪತಿ ಶೋಧನಾ ಸಮಿತಿ ಶಿಫಾರಸು ಆಧರಿಸಿ, ರಾಜ್ಯಪಾಲರು ಈ ನೇಮಕ ಮಾಡಿದ್ದಾರೆ. ದೇವನಾಥನ್ ಅವರು ತಿರುಪತಿ ವೇದ ವಿಶ್ವವಿದ್ಯಾಲಯದ ಕುಲಪತಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಡಾ. ಪದ್ಮಾಶೇಖರ್ ಅವರ ಅಧಿಕಾರಾವಧಿ 2019ರ ಜೂನ್ 16ರಂದು ಮುಕ್ತಾಯವಾಗಿತ್ತು. ಆಗಿನಿಂದ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಡೀನ್ ಪ್ರೊ.ವಿ.ಗಿರೀಶ್ ಚಂದ್ರ ಹಂಗಾಮಿ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.