ಗ್ರಾಮೀಣ ಭಾಗದ ಜನರು ದಸರಾ ಮಹೋತ್ಸವಕ್ಕೆ ಬರಬೇಡಿ: ಮೈಸೂರು ಜಿ.ಪಂ. ಸಿಇಒ ಮನವಿ

Update: 2020-10-16 16:20 GMT

ಮೈಸೂರು,ಅ.13: ಕೋವಿಡ್ ಹರಡುವ ಭೀತಿ ಹಿನ್ನಲೆ ಗ್ರಾಮೀಣ ಭಾಗದ ಜನರು ದಯವಿಟ್ಟು ಈ ಬಾರಿಯ ದಸರಾ ಮಹೋತ್ಸವಕ್ಕೆ ಬರಬೇಡಿ ಎಂದು ಜಿಲ್ಲಾ ಪಂಚಾಯತ್ ಸಿಇಒ ಡಿ.ಭಾರತಿ ಮನವಿ ಮಾಡಿದ್ದಾರೆ.

ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಾರಿ ದಸರಾ ಮಹೋತ್ಸವದಲ್ಲಿ ಜಂಬೂ ಸವಾರಿ ಮೆರವಣಿಗೆ ಇರುವುದಿಲ್ಲ, ಅರಮನೆಗೆ ಮಾತ್ರ ಜಂಬೂಸವಾರಿ ಸೀಮಿತವಾಗಿದೆ. ಕೋವಿಡ್ ಕಾರಣದಿಂದಾಗಿ ಸಾರ್ವಜನಿಕರಿಗೆ ಜಂಬೂ ಸವಾರಿ ನೋಡುವ ಅವಕಾಶ ಇಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದ ಜನರು ನಗರಕ್ಕೆ ಬರಬೇಡಿ, ಮನೆಯಲ್ಲೆ ಇದ್ದು ಟಿ.ವಿ.ಗಳಲ್ಲಿ ದಸರಾ ನೋಡಿ ಎಂದು ಹೇಳಿದರು.

ಸಾರ್ವಜನಿಕರ ಅನುಕೂಲಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಟೆಲಿಕಾಸ್ಟ್ ವ್ಯವಸ್ಥೆ ಮಾಡಲಾಗುತದೆ ಎಂದು ತಿಳಿಸಿದರು.

ಕೊರೋನ ಸೋಂಕಿನ ಲಕ್ಷಣ ಇರುವವರು ಪರೀಕ್ಷೆ ಮಾಡಿಸಿಕೊಳ್ಳಿ, 60 ವರ್ಷ ಮೇಲ್ಪಟ್ಟವರು ಮಕ್ಕಳು ಅನಾವಶ್ಯಕ ಓಡಾಟ ನಿಲ್ಲಿಸಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News