ಹೈದರಾಬಾದ್: ಭಾರೀ ಮಳೆಗೆ ರಸ್ತೆಗಳಲ್ಲಿ ಪ್ರವಾಹ, ಕೊಚ್ಚಿ ಹೋದ ವಾಹನಗಳು...

Update: 2020-10-14 07:43 GMT

  ಹೈದರಾಬಾದ್:ನಗರದಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಭಾರೀ ಮಳೆಯಾಗುತ್ತಿರುವುದರಿಂದ ಮಳೆ ನೀರು ತಗ್ಗು ಪ್ರದೇಶಗಳಿಗೆ ಪ್ರವೇಶಿಸುತ್ತಿದ್ದಂತೆ ರಸ್ತೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ನೀರಿನಿಂದ ತುಂಬಿ ತುಳುಕುತ್ತಿದ್ದವು.

ಹವಾಮಾನ ಇಲಾಖೆ ತೆಲಂಗಾಣ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ರಾಜ್ಯದಾದ್ಯಂತ ಹೆಚ್ಚಿನ ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ.

ಸೋಮವಾರ ಹಾಗೂ ಮಂಗಳವಾರ ಹೈದರಾಬಾದ್ ಹಾಗೂ ತೆಲಂಗಾಣದ ಇತರ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದಂತೆ ವಾಹನಗಳು ಮುಳುಗಿದ್ದರಿಂದ ರಸ್ತೆಗಳು ಕೊಳಗಳಾಗಿ ಮಾರ್ಪಟ್ಟಿವೆ.

ಸುದ್ದಿಸಂಸ್ಥೆ ಎಎನ್‌ಐ ಬುಧವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಹೈದರಾಬಾದ್‌ನ ಡೆಮ್ಮೈಗುಡಾ ಪ್ರದೇಶದಲ್ಲಿ ಮಳೆ ನೀರಿನಿಂದ ಕಾರೊಂದು ಕೊಚ್ಚಿಕೊಂಡು ಹೋಗುವ ದೃಶ್ಯವಿದೆ. ತೆಲಂಗಾಣದ ಕೆಲವು ನೆರೆ ಪೀಡಿತ ಪ್ರದೇಶಗಳ ದೃಶ್ಯಗಳನ್ನು ಸಹ ಎಎನ್‌ಐ ಹಂಚಿಕೊಂಡಿದೆ. ಫೋಟೊವೊಂದರಲ್ಲಿ ಕಾರೊಂದು ನೀರಿನಲ್ಲಿ ಮುಳುಗಿರುವುದು ಕಂಡುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News