ಕೋವಿಡ್19: ಸೋಂಕಿತರ ಪರೀಕ್ಷೆ ಹೆಚ್ಚಿಸಲು ಗುರಿ ನಿಗದಿಪಡಿಸಿದ ಆರೋಗ್ಯ ಇಲಾಖೆ

Update: 2020-10-14 18:02 GMT

ಬೆಂಗಳೂರು, ಅ.14: ದಿನೇ ದಿನೇ ಕೊರೋನ ಸೋಂಕಿತರ ಸಂಖ್ಯೆ ಹಬ್ಬುತ್ತಿದೆ. ವೇಗವಾಗಿ ಕೊರೋನ ನಿಯಂತ್ರಿಸುವ ಸಲುವಾಗಿ ರ‍್ಯಾಪಿಡ್ ಆಂಟಿಜನ್ ಪರೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ, ಜಿಲ್ಲೆಗಳಲ್ಲಿ ರ‍್ಯಾಪಿಡ್ ಆಂಟಿಜನ್ ಪರೀಕ್ಷೆಗಳನ್ನು ಮಾಡಲು ಆರೋಗ್ಯ ಇಲಾಖೆ ಗುರಿ ನಿಗದಿಪಡಿಸಿದ್ದು, ಕೆಲ ಜಿಲ್ಲೆಗಳಲ್ಲಿ ನಿಗದಿಪಡಿಸಿದ್ದಕ್ಕಿಂತ ಅಧಿಕ ಪ್ರಮಾಣದಲ್ಲಿ ಟೆಸ್ಟ್ ಮಾಡಲಾಗುತ್ತಿದೆ.

ರ‍್ಯಾಪಿಡ್ ಟೆಸ್ಟ್ ಗಿಂತ ಆರ್‍ಟಿಪಿಸಿಆರ್ ಅತ್ಯಂತ ವಿಶ್ವಾಸಾರ್ಹ ಪರೀಕ್ಷಾ ಪದ್ಧತಿ ಆಗಿದೆ. ಶೀಘ್ರವಾಗಿ ಮತ್ತು ಹೆಚ್ಚಿನ ಜನರಿಗೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಆದರೆ ಅದನ್ನೇ ಕೆಲ ಜಿಲ್ಲೆಗಳು ಹೆಚ್ಚು ಮಾಡಿವೆ. ಹಾಗಾಗಿ ದಿನಕ್ಕೆ ಇಂತಿಷ್ಟೇ ರ‍್ಯಾಪಿಡ್ ಟೆಸ್ಟ್ ಮಾಡುವಂತೆ ಜಿಲ್ಲೆಗಳಿಗೆ ನಿಗದಿತ ಗುರಿ ನೀಡಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News