ರಾಜ್ಯದಲ್ಲಿಂದು 7,542 ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 7.51 ಲಕ್ಷಕ್ಕೆ ಏರಿಕೆ

Update: 2020-10-16 15:55 GMT

ಬೆಂಗಳೂರು, ಅ.16: ರಾಜ್ಯದಲ್ಲಿ ಶುಕ್ರವಾರ 7,542 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 73 ಜನರು ಸೋಂಕಿಗೆ ಬಲಿಯಾಗಿದ್ದು, 8,580 ಜನರು ಗುಣಮುಖರಾಗಿದ್ದಾರೆ.

ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 7,51,390ಕ್ಕೆ ತಲುಪಿದ್ದು, 946 ಜನ ಸೋಂಕಿತರು ಐಸಿಯುನಲ್ಲಿದ್ದಾರೆ.

ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 10,356ಕ್ಕೆ ತಲುಪಿದೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆಗಳ 1,12,427ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

73 ಸೋಂಕಿತರು ಬಲಿ: ಬಾಗಲಕೋಟೆ 1, ಬಳ್ಳಾರಿ 2, ಬೆಳಗಾವಿ 1, ಬೆಂಗಳೂರು ನಗರ 24, ಚಾಮರಾಜನಗರ 3, ಚಿಕ್ಕಬಳ್ಳಾಪುರ 2, ಚಿತ್ರದುರ್ಗ 3, ದಕ್ಷಿಣ ಕನ್ನಡ 5, ಧಾರವಾಡ 3, ಹಾಸನ 3, ಕಲಬುರಗಿ 1, ಕೊಡಗು 3, ಕೋಲಾರ 2, ಮಂಡ್ಯ 2, ಮೈಸೂರು 3, ಶಿವಮೊಗ್ಗ 3, ತುಮಕೂರು 4, ಉಡುಪಿ 2, ಉತ್ತರ ಕನ್ನಡ 4, ವಿಜಯಪುರ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.  

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 7,542 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 76, ಬಳ್ಳಾರಿ 174, ಬೆಳಗಾವಿ 289, ಬೆಂಗಳೂರು ಗ್ರಾಮಾಂತರ 345, ಬೆಂಗಳೂರು ನಗರ 3,441, ಬೀದರ್ 14, ಚಾಮರಾಜನಗರ 62, ಚಿಕ್ಕಬಳ್ಳಾಪುರ 270, ಚಿಕ್ಕಮಗಳೂರು 101, ಚಿತ್ರದುರ್ಗ 95, ದಕ್ಷಿಣ ಕನ್ನಡ 220, ದಾವಣಗೆರೆ 280, ಧಾರವಾಡ 121, ಗದಗ 45, ಹಾಸನ 195, ಹಾವೇರಿ 32, ಕಲಬುರಗಿ 66, ಕೊಡಗು 105, ಕೋಲಾರ 69, ಕೊಪ್ಪಳ 41, ಮಂಡ್ಯ 246, ಮೈಸೂರು 404, ರಾಯಚೂರು 38, ರಾಮನಗರ 75, ಶಿವಮೊಗ್ಗ 136, ತುಮಕೂರು 173, ಉಡುಪಿ 211, ಉತ್ತರ ಕನ್ನಡ 111, ವಿಜಯಪುರ 73, ಯಾದಗಿರಿ ಜಿಲ್ಲೆಯಲ್ಲಿ 34 ಪ್ರಕರಣಗಳು ಪತ್ತೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News