ಕೊರೋನ ಸೋಂಕಿತ ಉಪನ್ಯಾಸಕರಿಗೆ ಆರ್ಥಿಕ ಸವಲತ್ತು ಕಲ್ಪಿಸಲು ಉಪನ್ಯಾಸಕರ ಸಂಘ ಆಗ್ರಹ

Update: 2020-10-17 12:30 GMT

ಬೆಂಗಳೂರು, ಅ.17: ಪೂರಕ ಪರೀಕ್ಷೆಯ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಿದ್ದ ವೇಳೆ ಕೊರೋನ ಸೋಂಕು ತಗುಲಿರುವ ಉಪನ್ಯಾಸಕರನ್ನು ಕೊರೋನ ವಾರಿಯರ್ಸ್ ಎಂದು ಪರಿಗಣಿಸಿ, ಚಿಕಿತ್ಸೆ ಮತ್ತು ಆರ್ಥಿಕ ಸವಲತ್ತುಗಳನ್ನು ಕಲ್ಪಿಸುವಂತೆ ಪಿಯುಸಿ ಉಪನ್ಯಾಸಕರ ಸಂಘ ಸರಕಾರಕ್ಕೆ ಪತ್ರ ಬರೆದಿದೆ.

ಕೋವಿಡ್-19 ಹಾವಳಿ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಮೌಲ್ಯಮಾಪನ ಆರಂಭಕ್ಕೂ ಮುನ್ನವೇ ಕೇಂದ್ರದ ಕೇಂದ್ರೀಕರಣ ಮಾಡದೇ ರಾಜ್ಯದ ವಲಯವಾರು ವಿಕೇಂದ್ರೀಕರಣ ಗೊಳಿಸುವಂತೆ ಮನವಿ ಮಾಡಲಾಗಿತ್ತು. ಆದರೆ, ಇಲಾಖೆಯು ಸಂಘದ ಕೋರಿಕೆಗೆ ಸ್ಪಂದಿಸದ್ದರಿಂದ, ಇಂದು 200ಕ್ಕೂ ಹೆಚ್ಚು ಉಪಸನ್ಯಾಕರಿಗೆ ಕೊರೋನ ಸೋಂಕು ತಗುಲಿದೆ ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ. ಎ.ಹೆಚ್. ಬೇಸರ ವ್ಯಕ್ತಪಡಿಸಿದ್ದಾರೆ.

ಮೌಲ್ಯಮಾಪನ ಸಂದರ್ಭದಲ್ಲಿ ಸೋಂಕು ತಗುಲಿರುವ ಉಪನ್ಯಾಸನಕರ ವೈದ್ಯಕೀಯ ವೆಚ್ಚನ್ನು ಇಲಾಖೆಯೇ ಭರಿಸಿಕೊಡಬೇಕು. ಕರ್ತವ್ಯದ ಸಂದರ್ಭದಲ್ಲಿ ಕೋವಿಡ್‍ಗೆ ತುತ್ತಾದರೆ ಅವರನ್ನ ಕೋವಿಡ್ ವಾರಿಯರ್ ಎಂದು ಪರಿಗಣಿಸಬೇಕು.ಆ ಕುಟುಂಬಕ್ಕೆ ಸರಕಾರ ನಿಗದಿ ಪಡಿಸಿರುವ 30ಲಕ್ಷ ರೂ ಪರಿಹಾರ ಹಣ ನೀಡಬೇಕೆಂದು ಮನವಿ ಮಾಡಿದೆ.

ನಗರದಲ್ಲಿ ಸುಮಾರು 43 ಮಂದಿ ಉಪನ್ಯಾಸಕರು ಸೋಂಕು ತಗುಲಿದ್ದು, ವಿವಿಧ ಆಸ್ಪತ್ರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಚಿಕಿತ್ಸಾ ವೆಚ್ಚವನ್ನ ಸರ್ಕಾರ ಭರಿಸುವಂತೆ ಪತ್ರ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News