ಕಾಂಗ್ರೆಸ್ ನಾಯಕರಿಗೆ ಉಪ ಚುನಾವಣೆ ಸೋಲುವ ಭೀತಿ: ಶ್ರೀರಾಮುಲು

Update: 2020-10-17 12:34 GMT

ಚಿತ್ರದುರ್ಗ, ಅ.17: ಕಾಂಗ್ರೆಸ್ ನಾಯಕರಿಗೆ ಶಿರಾ ಹಾಗೂ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಸೋಲಿನ ಹತಾಶೆ ಕಾಡುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ವ್ಯಂಗ್ಯವಾಡಿದರು.

ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಮಾತನಾಡಿದ ಅವರು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಪತಿ ಶ್ರೀನಿವಾಸ್ ಬಂಡಾಯ ಅಭ್ಯರ್ಥಿಯಾಗಿ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ನಿಂತಿದ್ದಾರೆ. ಅದರಿಂದ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೈ ಅಭ್ಯರ್ಥಿ ಕುಸುಮಾ ಅವರ ಮೇಲೆ ಎಫ್‍ಐಆರ್ ಹಾಕಿ ಬಿಜೆಪಿಯವರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂಬ ಕೆಪಿಸಿಸಿ ಅದ್ಯಕ್ಷ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‍ನವರು ಸರಕಾರ ನಡೆಸಿದ್ದ ಸಂದರ್ಭದಲ್ಲಿ ಈ ರೀತಿಯ ಲೋಪಗಳು ಆಗಿವೆ. ಈ ಎಫ್‍ಐಆರ್ ನಮ್ಮ ಸರಕಾರ ಹಾಕಿಲ್ಲ. ಬದಲಾಗಿ ಚುನಾವಣಾ ಆಯೋಗ ಎಫ್‍ಐಆರ್ ಹಾಕಿದ್ದು, ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸೋಲುವ ಹತಾಶೆಯಿಂದ ಡಿ.ಕೆ.ಶಿವಕುಮಾರ್ ಹಾಗೆ ಮಾತನಾಡುತ್ತಿದ್ದಾರೆ ಎಂದರು.

ಒಬ್ಬ ಹೆಣ್ಣು ಮಗಳ ಮೇಲೆ ಎಫ್‍ಐಆರ್ ಹಾಕಿಸಿದವರು ಗಂಡಸರೇನ್ರೀ ಎಂಬ ಡಿಕೆಶಿ ಹೇಳಿಕೆ ಕೆಂಡಾಮಂಡಲರಾದ ಶ್ರೀರಾಮುಲು, ಇಲ್ಲಿ ಹೀಗೆ ಮಾತನಾಡುವುದು ಕಾಂಗ್ರೆಸ್ ನವರ ಸಂಪ್ರದಾಯ, ಸಿಂಪತಿ ಗಿಟ್ಟಿಸಿಕೊಳ್ಳಲು ಈ ರೀತಿ ಡಿಕೆಶಿ ಮಾತನಾಡುತ್ತಿದ್ದು, ಅದು ಅವರಿಗೆ ವರ್ಕೌಟ್ ಆಗಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News