ಐದು ಲಕ್ಷ ಲಂಚ ಪಡೆದ ಆರೋಪ: ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ಅಮಾನತು

Update: 2020-10-17 13:53 GMT

ಬಳ್ಳಾರಿ, ಅ.17: ಅ.15ರಂದು ವ್ಯಕ್ತಿಯೊಬ್ಬರಿಂದ 5 ಲಕ್ಷ ರುಪಾಯಿ ಲಂಚ ಸ್ವೀಕರಿಸಿದ ಆರೋಪ ಎದುರಿಸುತ್ತಿರುವ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ಎಂ.ವಿ. ತುಷಾರಮಣಿ ಅವರನ್ನು ಅಮಾನತುಗೊಳಿಸುವಂತೆ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಅ.15ರಂದು ವ್ಯಕ್ತಿಯೊಬ್ಬರಿಂದ ಫಾರಂ-3 ನೀಡಲು ಎಂ.ವಿ. ತುಷಾರಮಣಿ ಅವರು ಲಂಚ ಸ್ವೀಕರಿಸಿ ಆಯುಕ್ತರ ಪದವಿಯ ಘನತೆಗೆ ಧಕ್ಕೆ ತಂದಿದ್ದಾರೆ. ಈ ಬಗ್ಗೆ ಎರಡು ಆಡಿಯೋ ಕ್ಲಿಪ್, ವಾಟ್ಸಾಪ್ ಸಂದೇಶ ಹಾಗೂ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಿಂದ ಬಳ್ಳಾರಿ ಮಹಾನಗರ ಪಾಲಿಕೆಯ ದೈನಂದಿನ ಕೆಲಸ ಕಾರ್ಯಗಳಲ್ಲಿ ಮುಜುಗರ ಉಂಟಾಗುತ್ತಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ನಗರಾಭಿವೃದ್ಧಿ ಇಲಾಖೆಗೆ ವರದಿ ನೀಡಿದ್ದರು.

ಇನ್ನು ನಗರಾಭಿವೃದ್ಧಿ ಇಲಾಖೆಯೂ, ಬಳ್ಳಾರಿಯ ನವ ಕರ್ನಾಟಕ ಯುವ ಶಕ್ತಿ ಸಂಘಟನೆ ದೂರು ನೀಡಿ ಆಯುಕ್ತರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದು, ಲಂಚದ ಹಣ ಪಡೆಯಲು ಕೆಎ-34, ಎಂ-6771 ವಾಹನ ಬಳಸಿರುವ ದೃಶ್ಯಾವಳಿಯೂ ಲಭ್ಯವಾಗಿದೆ.

ಅದರಂತೆ ಈ ವರದಿ ಆಧರಿಸಿ ಅಮಾನತುಪಡಿಸಲಾಗುತ್ತಿದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ. ಇನ್ನು ಪ್ರಭಾರ ಹುದ್ದೆಗೆ ಈರಪ್ಪ ಬಿರಾದಾರ ಪ್ರಭಾರ ಅವರನ್ನು ನೇಮಕ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News