ರಾಜ್ಯದಲ್ಲಿಂದು 7,184 ಕೊರೋನ ಪ್ರಕರಣಗಳು ದೃಢ

Update: 2020-10-17 15:57 GMT

ಬೆಂಗಳೂರು, ಅ.17: ರಾಜ್ಯದಲ್ಲಿ ಶನಿವಾರ 7,184 ಹೊಸ ಕೊರೋನ ಪ್ರಕರಣಗಳು ವರದಿಯಾಗಿದ್ದು, 71 ಜನರು ಮೃತಪಟ್ಟಿದ್ದಾರೆ ಹಾಗೂ 8,893 ಜನರು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಶನಿವಾರ ಕೊರೋನ ಸೋಂಕಿತರಿಗಿಂತಲೂ ಗುಣಮುಖರಾದವರ ಸಂಖ್ಯೆಯೇ ಅಧಿಕವಿದೆ. ಇದುವರೆಗೂ 6,37,481 ಜನರು ಗುಣಮುಖರಾಗಿದ್ದಾರೆ. ಇನ್ನು, ಸೋಂಕಿತರ ಸಂಖ್ಯೆ 7,58,574ಕ್ಕೆ ಏರಿಕೆಯಾಗಿದ್ದು, 1,10,647 ಸಕ್ರಿಯ ಪ್ರಕರಣಗಳಿವೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 10,427ಕ್ಕೆ ಏರಿಕೆಯಾಗಿದೆ. ಸೋಂಕಿತ ಖಚಿತ ಪ್ರಕರಣಗಳ ಶೇಖಡವಾರು ಪ್ರಮಾಣ ಶೇ.7.7 ಹಾಗೂ ಮರಣ ಪ್ರಮಾಣ ಶೇ.0.99 ರಷ್ಟಿದೆ.

ಸೋಂಕಿತರ ವಿವರ: ಬಾಗಲಕೋಟೆ 152, ಬಳ್ಳಾರಿ 189, ಬೆಳಗಾವಿ 298, ಬೆಂಗಳೂರು ಗ್ರಾಮಾಂತರ 220, ಬೆಂಗಳೂರು ನಗರ 3371, ಬೀದರ್ 10, ಚಾಮರಾಜನಗರ 49, ಚಿಕ್ಕಬಳ್ಳಾಪುರ 124, ಚಿಕ್ಕಮಗಳೂರು 129, ಚಿತ್ರದುರ್ಗ 80, ದಕ್ಷಿಣ ಕನ್ನಡ 172, ದಾವಣಗೆರೆ 41, ಧಾರವಾಡ 99, ಗದಗ 49, ಹಾಸನ 220, ಹಾವೇರಿ 61, ಕಲಬುರಗಿ 40, ಕೊಡಗು 77, ಕೋಲಾರ 78, ಕೊಪ್ಪಳ 65, ಮಂಡ್ಯ 192, ಮೈಸೂರು 501, ರಾಯಚೂರು 54, ರಾಮನಗರ 25, ಶಿವಮೊಗ್ಗ 129, ತುಮಕೂರು 281, ಉಡುಪಿ 210, ಉತ್ತರ ಕನ್ನಡ 123, ವಿಜಯಪುರ 69, ಯಾದಗಿರಿ 76 ಹೊಸ ಪ್ರಕರಣಗಳು ವರದಿಯಾಗಿವೆ.

ಮೃತಪಟ್ಟವರ ವಿವರ: ಬಾಗಲಕೋಟೆ 1, ಬಳ್ಳಾರಿ 2, ಬೆಳಗಾವಿ 2, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 14, ಚಾಮರಾಜನಗರ 2, ಚಿಕ್ಕಬಳ್ಳಾಪುರ 1, ದಕ್ಷಿಣ ಕನ್ನಡ 4, ದಾವಣಗೆರೆ 1, ಧಾರವಾಡ 3, ಗದಗ 1, ಹಾಸನ 3, ಹಾವೇರಿ 2, ಕೊಡಗು 2, ಕೋಲಾರ 5, ಮಂಡ್ಯ 3, ಮೈಸೂರು 10, ರಾಯಚೂರು 1, ರಾಮನಗರ 1, ಶಿವಮೊಗ್ಗ 1, ತುಮಕೂರು 4, ಉಡುಪಿ 1, ಉತ್ತರ ಕನ್ನಡ 4 ಹಾಗೂ ವಿಜಯಪುರದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ರಾಜ್ಯಾದ್ಯಂತ 63 ಜ್ವರ ಚಿಕಿತ್ಸಾಲಯದಲ್ಲಿ ಶನಿವಾರ 9,918 ವ್ಯಕ್ತಿಗಳು ಸೇರಿ ಇದುವರೆಗೂ 27,94,250 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 150 ಜ್ವರ ಚಿಕಿತ್ಸಾಲಯದಲ್ಲಿ ಇಂದು 4,108 ವ್ಯಕ್ತಿಗಳು ಸೇರಿದಂತೆ 3,63,484 ವ್ಯಕ್ತಿಗಳನ್ನು ಹಾಗೂ 69 ಖಾಸಗಿ ವೈದ್ಯಕೀಯ ಆಸ್ಪತ್ರೆ ಹಾಗೂ ಕಾಲೇಜುಗಳಲ್ಲಿ ಶನಿವಾರ 194 ವ್ಯಕ್ತಿಗಳು ಸೇರಿ ಒಟ್ಟು 1,80,721 ವ್ಯಕ್ತಿಗಳನ್ನು ತಪಾಸಣೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News