ಇನ್ನು ಮುಂದೆ ಐದು ದಿನಗಳಲ್ಲೇ ಸಿಗಲಿದೆ ಎಸೆಸೆಲ್ಸಿ ನಕಲಿ ಅಂಕಪಟ್ಟಿ

Update: 2020-10-18 14:53 GMT

ಬೆಂಗಳೂರು, ಅ. 18: ಎಸೆಸೆಲ್ಸಿ ಅಂಕಪಟ್ಟಿಯನ್ನು ಐದು ದಿನಗಳಲ್ಲೇ ನೀಡಲು ಶಿಕ್ಷಣ ಇಲಾಖೆ ಕ್ರಮಗಳನ್ನು ಕೈಗೊಂಡಿದೆ.

ಐದು ದಿನದೊಳಗೆ ನಕಲಿ ಅಂಕಪಟ್ಟಿ ನೀಡುವ ಉದ್ದೇಶದಿಂದ ಶಿಕ್ಷಣ ಇಲಾಖೆ ಡಿಜಿಟಲ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ಆನ್‍ಲೈನ್ ಮೂಲಕವೇ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ, ದಾಖಲೆಗಳನ್ನು ನೀಡಬಹುದಾಗಿದೆ. ಅರ್ಜಿ ಸಲ್ಲಿಸಿದ ಕೇವಲ ಐದು ದಿನಗಳಲ್ಲೇ ವಿದ್ಯಾರ್ಥಿಗೆ ನಕಲಿ ಅಂಕಪಟ್ಟಿ ಸಿಗಲಿದೆ.

ತತ್ಕಾಲ್ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕವೇ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಆನ್‍ಲೈನ್ ಮೂಲಕ ಅಥವಾ ಬ್ಯಾಂಕ್ ಇನ್ನಿತರೆ ವ್ಯವಸ್ಥೆಗಳ ಮೂಲಕ ಹಣವನ್ನು ಪಾವತಿ ಮಾಡಬಹುದಾಗಿದೆ. ಬಳಿಕ ವಿದ್ಯಾರ್ಥಿಗಳು ತಾವು ಸಲ್ಲಿಸಿದ ಅರ್ಜಿಯ ಪ್ರತಿಯನ್ನು ತಮ್ಮ ಶಾಲೆಗಳ ಮುಖ್ಯಸ್ಥರಿಗೆ ಸಲ್ಲಿಸಬೇಕಿದೆ. ಇದಾದ ಬಳಿಕ ಐದು ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಸಿಗಲಿದೆ.

ಆನ್‍ಲೈನ್ ಮೂಲಕವೇ ಶಾಲಾ ಮುಖ್ಯಸ್ಥರು, ಬಿಇಒ ಹಾಗೂ ಡಿಡಿಪಿಐ ಹಂತದಲ್ಲಿ ಪರಿಶೀಲನೆಗಳು ನಡೆಯಲಿವೆ. ಅರ್ಜಿ ಸಲ್ಲಿಸಿದ ಐದು ದಿನಗಳಲ್ಲಿ ಅಂಕಪಟ್ಟಿ ಶಾಲೆಯ ಮುಖ್ಯಸ್ಥರ ಕಚೇರಿಗೆ ತಲುಪಲಿದೆ. ಒಂದು ವೇಳೆ ತುರ್ತಾಗಿ ಬೇಕಿರದವರಿಗೆ ಅಂಕಪಟ್ಟಿಗಳು 30 ದಿನಗಳಲ್ಲಿ ಸಿಗಲಿದೆ. ಒಬ್ಬ ವಿದ್ಯಾರ್ಥಿ ನಾಲ್ಕು ಬಾಕಿ ನಕಲಿ ಅಂಕಪಟ್ಟಿಯನ್ನು ಪಡೆಬಹುದಾಗಿದೆ ಎಂದು ವರದಿಗಳು ತಿಳಿಸಿವೆ.

ಈ ಮೊದಲು ಎಸೆಸೆಲ್ಸಿ ನಕಲಿ ಅಂಕ ಪಟ್ಟಿ ಪಡೆಯಲು ಜನರು ಸ್ವತಃ ಶಿಕ್ಷಣ ಮಂಡಳಿಗೆ ತೆರಳಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕಿತ್ತು. ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಈ ಅರ್ಜಿಗಳು ತಲುಪಲು ತಿಂಗಳಾನುಗಟ್ಟಲೆ ಕಾಲಾವಕಾಶ ತೆಗೆದುಕೊಳ್ಳುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News