ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಪುತ್ರ ನಿಧನ

Update: 2020-10-18 15:47 GMT

ಶಿವಮೊಗ್ಗ, ಅ.18: ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಅವರ ಪುತ್ರ ಸುಹಾಸ್ (31) ಅವರು ಹೃದಯಾಘಾತದಿಂದ ರವಿವಾರ ಬೆಳಗ್ಗೆ ನಿಧನರಾಗಿದ್ದಾರೆ.

ಇಲ್ಲಿನ ಶರಾವತಿ ನಗರದ ಸ್ವಗೃಹದಲ್ಲಿ ಇವರಿಗೆ ಹೃದಯಾಘಾತ ಸಂಭವಿಸಿದ್ದು, ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಅಸುನೀಗಿದ್ದಾರೆ.

2013ರಲ್ಲಿ ಅಪಘಾತ ಸಂಭವಿಸಿ, ಸುಹಾಸ್ ಅವರಿಗೆ ಗಂಭೀರ ಗಾಯಗಳಾಗಿದ್ದವು. ಹಲವು ಸಲ ಇವರು ಆಪ‌ರೇಷನ್‌ಗೂ ಒಳಗಾಗಿದ್ದರು. ಇವರಿಗೆ ಮೂರು ವರ್ಷದ ಹಿಂದಷ್ಟೇ ಮದುವೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News