ಕಾವೇರಿ ನದಿಯಲ್ಲಿ ಕೊಚ್ಚಿ ಹೋದ ಯುವಕ
Update: 2020-10-18 22:16 IST
ಮಂಡ್ಯ, ಅ.18: ಅಸ್ಥಿ ಬಿಡಲು ಬಂದ ಬೆಂಗಳೂರಿನ ವ್ಯಕ್ತಿ ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಘೋಸಾಯ್ ಘಾಟ್ನಲ್ಲಿ ಶನಿವಾರ ನಡೆದಿದೆ.
ಘಟನೆಯಲ್ಲಿ ಓರ್ವನ ರಕ್ಷಣೆ ಮಾಡಲಾಗಿದ್ದು, ಬೆಂಗಳೂರಿನ ಗವಿಪುರಂ ಶ್ರೀಪ್ರಸಾದ್ (31) ನದಿಯಲ್ಲಿ ಕೊಚ್ಚಿ ಹೋದ ವ್ಯಕ್ತಿಯಾಗಿದ್ದಾರೆ.
ಶ್ರೀಪ್ರಸಾದ್ ಜೊತೆ ಬಂದಿದ್ದ ಆತನ ಬಾವ ಮಯೂರ್ ಅವರನ್ನು ರಕ್ಷಣೆ ಮಾಡಲಾಗಿದೆ. ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.