ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆಗೆ ಆನ್‍ಲೈನ್ ಅರ್ಜಿ ಆಹ್ವಾನ

Update: 2020-10-19 13:58 GMT

ಬೆಂಗಳೂರು, ಅ. 19: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯವರು ಭಾರತ ಸರಕಾರದ ಶಿಕ್ಷಣ ಮಂತ್ರಾಲಯದ ಸಹಯೋಗದಲ್ಲಿ ¨2021-22ರ ಶೈಕ್ಷಣಿಕ ವರ್ಷಕ್ಕಾಗಿ 6ನೆ ತರಗತಿ ಮತ್ತು 9ನೆ ತರಗತಿಗಳ ಪ್ರವೇಶಕ್ಕಾಗಿ ದೇಶದಾದ್ಯಂತ 33 ಸೈನಿಕ ಶಾಲೆಗಳಲ್ಲಿ ಸೈನಿಕ ಪ್ರವೇಶ ಪರೀಕ್ಷೆಯನ್ನು 2021ರ ಜನವರಿ 10ರಂದು ನಡೆಸಲಾಗುವುದು.

ಆರನೇ ತರಗತಿಗೆ ಪ್ರವೇಶ ಪಡೆಯುವ ಅಭ್ಯರ್ಥಿಗಳು ಮಾರ್ಚ್ 31, 2021ಕ್ಕೆ 10 ರಿಂದ 12 ವರ್ಷದ ನಡುವೆ ಇರಬೇಕು. ಬಾಲಕ ಮತ್ತು ಬಾಲಕಿಯರಿಗೆ ಎಲ್ಲಾ ಸೈನಿಕ ಶಾಲೆಗಳಲ್ಲಿ ಪ್ರವೇಶ ತೆರೆದಿರುತ್ತದೆ. ಒಂಭತ್ತನೇ ತರಗತಿ ಅಭ್ಯರ್ಥಿಗಳು ಮಾರ್ಚ್ 31, 2021ಕ್ಕೆ 13ರಿಂದ 15 ವರ್ಷದ ನಡುವೆ ಇರಬೇಕು ಹಾಗೂ ಪ್ರವೇಶ ಸಮಯದಲ್ಲಿ ಒಂದು ಮಾನ್ಯತೆ ಹೊಂದಿರುವ ಶಾಲೆಯಿಂದ 8ನೇ ತರಗತಿಗೆ ತೇರ್ಗಡೆ ಹೊಂದಿರಬೇಕು.

ಪರೀಕ್ಷಾ ಶುಲ್ಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ 400 ರೂ.ಗಳು ಹಾಗೂ ಇತರರಿಗೆ 550 ರೂ.ಗಳು. ಪರೀಕ್ಷಾ ದಿನಾಂಕ, ಪಠ್ಯಕ್ರಮ, ಸೈನಿಕ ಶಾಲೆಗಳ ಪಟ್ಟಿ, ತಾತ್ಕಾಲಿಕ ಪ್ರವೇಶ, ಸೀಟುಗಳ ಮೀಸಲು ಹಾಗೂ ಇತರೆ ಮಾಹಿತಿಗಾಗಿ ವೆಬ್‍ಸೈಟ್ www.nta.ac.in ನಲ್ಲಿ ಮಾಹಿತಿ ಕೈಪಿಡಿ ಲಭ್ಯವಿರುತ್ತದೆ.

ಭಾರತದಾದ್ಯಂತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಕೆ (ಎಐಎಸ್‍ಎಸ್‍ಇಇ) ಪ್ರವೇಶ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ವಿವರವಾದ ಮಾಹಿತಿ ಕೈಪಿಡಿಯನ್ನು ಓದಿಕೊಂಡು ಆನ್‍ಲೈನ್ ಮೂಲಕ ವೆಬ್‍ಸೈಟ್ https://aissee.nta.nic.in ನಲ್ಲಿ ಅಕ್ಟೋಬರ್ 2020ರ ಅಕ್ಟೋಬರ್ 20 ರಿಂದ ನವೆಂಬರ್ 19 ರೊಳಗೆ ಅರ್ಜಿ ಸಲ್ಲಿಸಬೇಕು. ಪರೀಕ್ಷಾ ಶುಲ್ಕವನ್ನು ಸಹ ಆನ್‍ಲೈನ್ ಮೂಲಕ ಪೇಮೆಂಟ್ ಗೇಟ್‍ವೇಗಳಾದ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಇಂಟರ್‍ನೆಟ್ ಪ್ಯಾಕಿಂಗ್ ಅಥವಾ ಪೇಟಿಎಂ ವ್ಯಾಲೆಟ್ ಮೂಲಕ ಪಾವತಿಸಹುದು.

ಹೆಚ್ಚಿನ ವಿವರಗಳಿಗಾಗಿ ಬ್ಲಾಕ್ ಸಿ20, 1ಎ/8, ಐಐಟಿಕೆ ಔಟ್ ರೀಚ್ ಸೆಂಟರ್, ಸೆಕ್ಟರ್ 62, ನೋಯ್ಡಾ, ಗೌತಮಬುದ್ಧ ನಗರ್ ಜಿಲ್ಲೆ, ಉತ್ತರಪ್ರದೇಶ-201309ನ್ನು ಸಂಪರ್ಕಿಸಬಹುದು, ಅಲ್ಲಿದೆ ಮೇಲಿನ ಲಿಂಕ್‍ಗಳನ್ನು ಶಾಲಾ ವೆಬ್‍ಸೈಟ್ www.sainikschoolkodagu.edu.in ನಲ್ಲಿ ಸಹ ಪಡೆಯಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News