ಲಡಾಖ್‌ನಲ್ಲಿ ಬಂಧಿಸಲ್ಪಟ್ಟಿದ್ದ ಚೀನಾ ಸೈನಿಕನ ಹಸ್ತಾಂತರ

Update: 2020-10-21 05:42 GMT

ಹೊಸದಿಲ್ಲಿ: ಪೂರ್ವ ಲಡಾಖ್‌ನ ಚುಮರ್-ಡೆಮ್ಚುಕ್ ಪ್ರದೇಶದಲ್ಲಿ ಸೋಮವಾರ ಭಾರತೀಯ ಸೇನೆಯು ವಶಕ್ಕೆ ತೆಗೆದುಕೊಂಡಿರುವ ಚೀನಿ ಸೈನಿಕನನ್ನು ಮಂಗಳವಾರ ರಾತ್ರಿ ಚೀನಾಕ್ಕೆ ಹಸ್ತಾಂತರಿಸಲಾಗಿದೆ.

ಕಾರ್ಪೊರೆಲ್ ವಾಂಗ್ ಯಾ ಲಾಂಗ್ ಎಂದು ಗುರುತಿಸಲಾಗಿರುವ ಚೀನಾ ಸೈನಿಕ ವಾಸ್ತವ ರೇಖೆಯ ಭಾರತದ ಪಾರ್ಶ್ವದಲ್ಲಿ ಅಡ್ಡಾಡುತ್ತಿದ್ದಾಗ ವಶಕ್ಕೆ ಪಡೆದಿದ್ದ ಭಾರತೀಯ ಸೇನೆಯು ಆತನಿಗೆ ಆಮ್ಲಜನಕ ಸೇರಿದಂತೆ ವೈದ್ಯಕೀಯ ನೆರವು, ಆಹಾರ ಹಾಗೂ ಬೆಚ್ಚಗಿನ ಬಟ್ಟೆಗಳನ್ನು ಒದಗಿಸಿತ್ತು ಎಂದು ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ. ಲಾಂಗ್ ನನ್ನು ವಶಕ್ಕೆ ಪಡೆದುಕೊಂಡಾಗ ಆತನ ಬಳಿ ನಾಗರಿಕ ಹಾಗೂ ಮಿಲಿಟರಿ ದಾಖಲೆಗಳಿದ್ದವು ಎಂದು ಕೆಲವು ವರದಿಗಳು ತಿಳಿಸಿವೆ.

 ಚೀನಾ ಕುರಿತ ತಜ್ಞರು ಲಾಂಗ್‌ನನ್ನು ಪ್ರಶ್ನಿಸಿದ ಬಳಿಕ ಚೀನಾ ಸೈನಿಕನನ್ನು ಪೀಪಲ್ಸ್ ಲಿಬರೇಶನ್ ಆರ್ಮಿಗೆ(ಪಿಎಲ್‌ಎ)ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಲಾಂಗ್‌ನನ್ನು ಪ್ರಶ್ನಿಸಿದ ಬಳಿಕ ಸ್ಥಾಪಿತ ಶಿಷ್ಟಾಚಾರದ ಪ್ರಕಾರ ಆತನನ್ನು ಚೀನಿ ಸೇನೆಗೆ ಹಸ್ತಾಂತರಿಸಲಾಗುವುದು ಎಂದು ಮೂಲಗಳು ಸೋಮವಾರ ತಿಳಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News