ಪ್ರೊ.ಕಟ್ಟಿಮನಿ, ನಟ ದತ್ತಣ್ಣ ಸೇರಿ 6 ಮಂದಿಗೆ ಕಸಾಪ ಪ್ರೊ.ಮರಿದೇವರು ಪ್ರತಿಷ್ಠಾನ ದತ್ತಿ ಪ್ರಶಸ್ತಿ

Update: 2020-10-22 13:32 GMT

ಬೆಂಗಳೂರು, ಅ.22: ಕನ್ನಡ ಸಾಹಿತ್ಯ ಪರಿಷತ್‍ನ ಪ್ರೊ.ಸಿ.ಎಚ್.ಮರಿದೇವರು ಪ್ರತಿಷ್ಠಾನ ದತ್ತಿ ಪ್ರಶಸ್ತಿಗೆ ಶಿಕ್ಷಣ ತಜ್ಞ ಪ್ರೊ.ತೇಜಸ್ವಿ ವಿ.ಕಟ್ಟಿಮನಿ, ಹಿರಿಯ ನಟ ಎಚ್.ಜಿ.ದತ್ತಣ್ಣ, ಕವಯಿತ್ರಿ ಡಾ.ಕೆ.ಎನ್.ಲಾವಣ್ಯಪ್ರಭಾ, ಕೃಷಿ ತಜ್ಞ ಬಸವರಾಜ ಸಂತೇಶಿವರ, ಲೇಖಕಿ ಶೈಲಾ ನಾಗರಾಜ್ ಹಾಗೂ ಕ್ರೀಡಾಪಟು ಜಿ.ಕೆ.ವಿಜಯಕುಮಾರಿ ಆಯ್ಕೆಯಾಗಿದ್ದಾರೆ.

ಗುರುವಾರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಈ ಮೇಲಿನ ಸಾಧಕರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಮೊತ್ತ 20 ಸಾವಿರ ರೂ.ಆಗಿದ್ದು, ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.

ಆಯ್ಕೆ ಸಮಿತಿಯಲ್ಲಿ ಸದಸ್ಯರಾದ ಎಸ್.ಎಸ್.ರಾಜಶೇಖರ್, ಎಂ.ಎಸ್.ರವಿಕುಮಾರ್, ಕಸಾಪ ಗೌರವ ಕಾರ್ಯದರ್ಶಿ ಡಾ.ರಾಜಶೇಖರ ಹತಗುಂದಿ, ವ.ಚ.ಚನ್ನೇಗೌಡ ಹಾಗೂ ಡಾ.ಪದ್ಮರಾಜ ದಂಡಾವತಿ ಉಪಸ್ಥಿತರಿದ್ದರೆಂದು ಕಸಾಪ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News