ಮೈಸೂರು ವಿವಿ 100ನೇ ಘಟಿಕೋತ್ಸವದಲ್ಲಿ ಪಿಎಚ್‍ಡಿ ಪಡೆದ ಅಣ್ಣ-ತಂಗಿ

Update: 2020-10-22 17:02 GMT

ಮೈಸೂರು,ಅ.22: ಇತ್ತೀಚೆಗೆ ನಡೆದ ಮೈಸೂರು ವಿಶ್ವವಿದ್ಯಾನಿಲಯದ 100ನೇ ಘಟಿಕೋತ್ಸವದಲ್ಲಿ ಒಂದೇ ಕುಟುಂಬದ ಅಣ್ಣ- ತಂಗಿ ಡಾ.ದಿನೇಶ.ಎಂ.ಎನ್ ಹಾಗೂ ಡಾ.ವೀಣಾ.ಎಂ.ಎನ್ ಇಬ್ಬರು ಪಿಎಚ್.ಡಿ ಪದವಿ ಪಡೆದುಕೊಂಡಿದ್ದಾರೆ.

ಇವರು ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಹೋಬಳಿ, ಕಣಗಾಲು ಗ್ರಾಮ(ಪುಟ್ಟಣ್ಣ ಕಣಗಾಲ್)ದ ನಂಜುಂಡನಾಯಕ ಮತ್ತು ಸಾವಿತ್ರಮ್ಮನವರ ದಂಪತಿಗಳ ಮಕ್ಕಳಾಗಿದ್ದು, ಕಣಗಾಲು ಗ್ರಾಮದಲ್ಲಿ ಮೊದಲ ಪಿಎಚ್‍ಡಿ ಪಡೆದವರು ಎಂಬ ಹೆಗ್ಗಳಿಕೆ ಇವರದಾಗಿದೆ.

ಡಾ.ದಿನೇಶ.ಎಂ.ಎನ್ ಅವರು ಜಾನಪದ ವಿಷಯದಲ್ಲಿ “ಮೈಸೂರು ನಗರದ ಪಾರಂಪರಿಕ ದೇವಾಲಯಗಳ ಜಾನಪದೀಯ ಅಧ್ಯಯನ” ಎಂಬ ವಿಷಯವನ್ನು ಡಾ.ಸೌಭಾಗ್ಯವತಿ ಅವರ ಮಾರ್ಗದರ್ಶನದಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ್ದರು.

ಡಾ.ವೀಣಾ.ಎಂ.ಎನ್ ಅವರು ಕನ್ನಡ ವಿಷಯದಲ್ಲಿ “ಮಹಿಳಾ ಪ್ರವಾಸ ಸಾಹಿತ್ಯಾಧ್ಯಯನ” ಎಂಬ ವಿಷಯವನ್ನು ಡಾ.ಎಸ್.ಡಿ.ಶಶಿಕಲಾ ಅವರ ಮಾರ್ಗದರ್ಶನದಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News