ಪ್ರವಾಹಪೀಡಿತರ ನಕಲಿ ರಕ್ಷಣೆ ಕಾರ್ಯಾಚರಣೆ ನಡೆಸಿದ ಆರೋಪದಲ್ಲಿ ಎಸ್ಸೈ ಅಮಾನತು!
Update: 2020-10-23 14:50 IST
ಕಲಬುರಗಿ, ಅ.23: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರಚಾರದ ಉದ್ದೇಶದಿಂದ ನಕಲಿ ರಕ್ಷಣಾ ಕಾರ್ಯಚಾರಣೆ ನಡೆಸಿದ ಆರೋಪದಲ್ಲಿ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಮಲ್ಲಣ್ಣ ಯಲಗೊಂಡ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಮಿ ಮರಿಯಮ್ ಜಾರ್ಜ್ ಆದೇಶ ಹೊರಡಿಸಿದ್ದಾರೆ.
ಕಲಬುರಗಿ ಜಿಲ್ಲಾದ್ಯಂತ ಪ್ರವಾಹದಿಂದ ತತ್ತರಿಸಿದ್ದ ವೇಳೆಯಲ್ಲಿ ಎಸ್ಸೈ ಮಲ್ಲಣ್ಣ ಯಲಗೊಂಡ ಅವರು ಜನರ ಮತ್ತು ಪ್ರಾಣಿಗಳನ್ನು ರಕ್ಷಿಸಿದಂತೆ ನಕಲಿ ವಿಡಿಯೋಗಳನ್ನು ಸೃಷ್ಠಿಸಿ ಪೋಸು ಕೊಟ್ಟಿದ ವಿಡಿಯೋಗಳು ವೈರಲ್ ಆಗಿದ್ದವು. ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆ ಮಾಡಿದ ಈ ರೀತಿ ನಕಲಿ ಕಾರ್ಯಾಚರಣೆ ನಡೆಸಿರುವ ನಾಟಕಿಯ ಮಾಡಿದ್ದು ಸರಿಯಲ್ಲ ಎಂದು ಎಸ್ಪಿ ತಮ್ಮ ಅಮಾನುತುಗೊಳಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ಈ ಹಿಂದೊಮ್ಮೆ ಲಾಕ್ಡೌನ್ ವೇಳೆ ಸುರಕ್ಷಿತ ಅಂತರ ಪ್ರಜ್ಞೆ ಮರೆತು ಹುಟ್ಟುಹಬ್ಬಕ್ಕೆ ಕ್ಷೀರಾಭೀಷೇಕ ಮಾಡಿಸಿಕೊಂಡು ಸಂಭ್ರಮಿಸಿದ ಆರೋಪದಲ್ಲಿ ಮಲ್ಲಣ್ಣ ಯಲಗೊಂಡ ಅಮಾನತುಗೊಂಡಿದ್ದರು.