×
Ad

ಮೈಸೂರು: ಐದನೇ ದಿನಕ್ಕೆ ಕಾಲಿಟ್ಟ ದಸಂಸ ಅನಿರ್ಧಿಷ್ಟಾವಧಿ ಪ್ರತಿಭಟನೆ

Update: 2020-10-23 22:10 IST

ಮೈಸೂರು,ಅ.23: ಭ್ರಷ್ಟಾಚಾರದಲ್ಲಿ ತೊಡಗಿರುವ ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕಳೆದ ಐದು ದಿನಗಳಿಂದ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆಯಲ್ಲಿ ಶುಕ್ರವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದ ರಸ್ತೆಯಲ್ಲಿ ಪಂಜಿನ ಮೆರವಣಿಗೆ ನಡೆಸಿದರು.

ಇದೇ ವೇಳೆ ಮಾತನಾಡಿದ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಅರಮನೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಉಪನಿರ್ದೇಶಕರಾಗಿರುವ ಟಿ.ಎಸ್.ಸುಬ್ರಮಣ್ಯ ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದಾರೆ. ಜೊತೆಗೆ ಕಾನೂನು ಬಾಹಿರವಾಗಿ ಮೂರು ಬಾರಿ ಪದೋನ್ಮತಿ ಪಡೆದಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ನಮ್ಮ ಹೋರಾಟ ಹಿಂಪಡೆಯುವುದಿಲ್ಲ ಎಂದು ಹೇಳಿದರು.

ಪಂಜಿನ ಮೆರವಣಿಗೆಯಲ್ಲಿ ಚೋರನಹಳ್ಳಿ ಶಿವಣ್ಣ, ಕೆ.ವಿ.ದೇವೇಂದ್ರ, ಎಡದೊರೆ ಮಹಾದೇವಯ್ಯ, ಕಿರಂಗೂರು ಸ್ವಾಮಿ, ಅರಸಿನಕೆರೆ ಶಿವರಾಜು, ಉಮಾಮಹಾದೇವ್, ಶಿವಮೂರ್ತಿ ಶಂಕರಪುರ, ದೇವರಾಜ್ ಬಿಳಿಕೆರೆ, ಆಲತ್ತೂರು ಶಿವರಾಜ್, ರವಿಕುಮಾರ್ ಏಚಗಳ್ಳಿ, ರಂಗಸಮುದ್ರ ಆನಂದ್, ಬೊಮ್ಮನಹಳ್ಳಿ ಶಂಕರ್, ಅಣ್ಣಯ್ಯ ಪುರಂ, ವರುಣ ಮಹೇಶ್, ಸಂತೋಷ್ ಪಡುವಾರಹಳ್ಳಿ, ಬೊಮ್ಮೇನಹಳ್ಳಿ ಮಹದೇವ್, ರಂಗಸಮುದ್ರ ಪುಟ್ಟರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News