ಕನಿಷ್ಠ ಬೆಂಬಲ ಬೆಲೆ ನಿಗದಿ: ಕೊಬ್ಬರಿಗೆ 10,300 ರೂ., ಭತ್ತಕ್ಕೆ 1,815 ರೂ.
ಬೆಂಗಳೂರು, ಅ. 23: ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಉಂಡೆಕೊಬ್ಬರಿ, ಹೆಸರು, ಉದ್ದು, ಸೋಯಾಬಿನ್, ಶೇಂಗಾ, ಭತ್ತ, ಬಿಳಿಜೋಳ ಹಾಗೂ ರಾಗಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದ್ದು, ತೊಗರಿ ಖರೀದಿಗೆ ಕೇಂದ್ರದ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 10,300 ರೂ.ನಿಗದಿ ಪಡಿಸಿದ್ದು, 1 ಸಾವಿರ ರೂ.ಪ್ರೋತ್ಸಾಹ ಧನ ಸೇರಿ ಒಟ್ಟು 11,300 ಪ್ರತಿ ಕ್ವಿಂಟಾಲ್‍ಗೆ ನೀಡಲಾಗುವುದು. ಹೆಸರು-7,196 ರೂ., ಉದ್ದು-6,575 ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸೋಯಾಬಿನ್(ಹಳದಿ) ಕ್ವಿಂಟಾಲ್‍ಗೆ-3,880 ರೂ., ಶೇಂಗಾ-5,275 ರೂ., ಭತ್ತ(ಸಾಮಾನ್ಯ)- 1,815 ರೂ., ಭತ್ತ ಗ್ರೇಡ್ `ಎ'- 1,835 ರೂ., ಬಿಳಿಜೋಳ(ಹೈಬ್ರಿಡ್)-2,550 ರೂ., ಬಿಳಿಜೋಳ (ಮಾಲ್ದಳಿ) 2,570 ಹಾಗೂ ರಾಗಿ ಪ್ರತಿ ಕ್ವಿಂಟಾಲ್‍ಗೆ 3,150 ರೂ.ನಿಗದಿಪಡಿಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.