ಎಚ್-1ಬಿ ನಿಷೇಧದಿಂದ ಅಮೆರಿಕಕ್ಕೆ 100 ಬಿಲಿಯ ಡಾ. ನಷ್ಟ

Update: 2020-10-23 18:39 GMT

ವಾಶಿಂಗ್ಟನ್, ಅ. 23: ಎಚ್-1ಬಿ ಮತ್ತು ಎಲ್-1 ವೀಸಾಗಳ ಅಡಿಯಲ್ಲಿ ಪರಿಣತ ವಿದೇಶಿ ಉದ್ಯೋಗಿಗಳ ಅಮೆರಿಕ ಪ್ರವೇಶವನ್ನು ನಿಷೇಧಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆದೇಶದಿಂದಾಗಿ ಅಮೆರಿಕದ ಕಂಪೆನಿಗಳಿಗೆ ಸುಮಾರು 100 ಬಿಲಿಯ ಡಾಲರ್ (ಸುಮಾರು 7.38 ಲಕ್ಷ ಕೋಟಿ ರೂಪಾಯಿ) ನಷ್ಟವಾಗಿದೆ ಹಾಗೂ ದೇಶದ ಕಂಪೆನಿಗಳ ಮೇಲೆ ಅದು ಶಾಶ್ವತ ವ್ಯತಿರಿಕ್ತ ಪರಿಣಾಮಗಳನ್ನು ಬೀರಲಿದೆ ಎಂದು ಬ್ರೂಕಿಂಗ್ಸ್ ಇನ್‌ಸ್ಟಿಟ್ಯೂಟ್ ಹೇಳಿದೆ.

ಜೂನ್ 22ರಂದು ಟ್ರಂಪ್ ಸಹಿ ಹಾಕಿರುವ ಸರಕಾರಿ ಆದೇಶವು ಡಿಸೆಂಬರ್ 31ರವರೆಗೆ ಹೊಸದಾಗಿ ಎಚ್-1ಬಿ ಮತ್ತು ಎಲ್-1 ವೀಸಾಗಳನ್ನು ನೀಡುವುದನ್ನು ನಿಷೇಧಿಸಿದೆ.

ಈ ಆದೇಶವು ‘ಫಾರ್ಚುನ್ 500’ ಕಂಪೆನಿಗಳ ವೌಲ್ಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರಿದೆ ಹಾಗೂ 100 ಬಿಲಿಯ ಡಾಲರ್‌ಗೂ ಅಧಿಕ ನಷ್ಟಕ್ಕೆ ಕಾರಣವಾಗಿದೆ ಎಂದು ಅದು ಈ ವಾರ ಬಿಡುಗಡೆ ಮಾಡಿದ ವರದಿಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News