'ಉಚಿತವಾಗಿ ಕೊರೋನ ಲಸಿಕೆ' ಭರವಸೆ: ಪ್ರಣಾಳಿಕೆ ಸಮರ್ಥಿಸಿಕೊಂಡ ಈಶ್ವರಪ್ಪ

Update: 2020-10-24 17:40 GMT

ದಾವಣಗೆರೆ, ಅ.24: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದಾಗ ಹಾಗೂ ಸಮ್ಮಿಶ್ರ ಸರ್ಕಾರ ಇದ್ದಾಗ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾಗ ರಾಜ್ಯದಲ್ಲಿ ಬರಗಾಲವಿತ್ತು. ಒಬ್ಬ ಮಂತ್ರಿಗಳೂ ಸ್ಥಳಕ್ಕೆ ಹೋಗಲಿಲ್ಲ. ಆಗ ಸುಮ್ಮನಿದ್ದ ಅವರು ಈಗ ಟೀಕೆ ಮಾಡುತ್ತಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೀಕೆ ಮಾಡುವುದಕ್ಕೆ ಸಿದ್ದರಾಮಯ್ಯ ಇದ್ದಾರೆ. ಕಾರಜೋಳರ ಮಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇವರು ಟೀಕೆ ಮಾಡುತ್ತಿದ್ದಾರೆ. ಎಲ್ಲಾ ಟೀಕೆಗಳಿಗೆ ಉತ್ತರ ಕೊಡಲ್ಲ. ದಯಮಾಡಿ ಎಲ್ಲದಕ್ಕೂ ಟೀಕೆ ಮಾಡಬೇಡಿ ಎಂದು ಮನವಿ ಮಾಡಿದರು.   

ಗ್ರಾಮ ಪಂಚಾಯತ್ ಚುನಾವಣೆಗೆ ಸಿದ್ಧ  

ಚುನಾವಣೆಗೆ ರಾಜ್ಯ ಸರ್ಕಾರ ಸಂಪೂರ್ಣ ಸಜ್ಜಾಗಿದೆ. ಚುನಾವಣೆ ನಡೆದರೆ ಕೋವಿಡ್ ಹೆಚ್ಚಾಗಬಹುದು ಎಂಬ ಭಯ ಇದೆ. ಜೆಡಿಎಸ್, ಕಾಂಗ್ರೆಸ್ ಚುನಾವಣೆ ಬೇಡ ಎಂದು ಪತ್ರ ಬರೆದಿದ್ದಾರೆ. ಆದರೆ ಈ ಕುರಿತು ಸಭೆ ನಡೆಸಲ್ಲ. ಚುನಾವಣಾ ಆಯೋಗ ನ್ಯಾಯಾಲಯ ಸ್ಪಷ್ಟಪಡಿಸಿದರೆ ಚುನಾವಣಾ ನಡೆಸಲು ಸಿದ್ಧ ಎಂದರು.   

ಪ್ರಣಾಳಿಕೆ ಸಮರ್ಥಿಸಿಕೊಂಡ ಈಶ್ವರಪ್ಪ 
ಬಿಹಾರದ ಚುನಾವಣಾ ಪ್ರಣಾಳಿಕೆಯಲ್ಲಿ ಕೊರೋನ ಲಸಿಕೆ ಉಚಿತ ಎನ್ನುವ ವಿಚಾರವನ್ನು ಸಮರ್ಥಿಸಿಕೊಂಡ ಅವರು, ಪ್ರಣಾಳಿಕೆಗಳು ಜನರ ವಿಶ್ವಾಸ ಹೆಚ್ಚಿಸುತ್ತವೆ. ಅದರಲ್ಲಿ ತಪ್ಪು ಹುಡುಕಿದರೆ ತಪ್ಪೇ ಕಾಣಿಸುತ್ತೇ. ಒಳ್ಳೆಯದು ಅಂದರೆ ಒಳ್ಳೆಯದಾಗಿರುತ್ತದೆ. ತಪ್ಪು ಸರಿ ಎನ್ನುವುದು ಜನರು ತೀರ್ಮಾನ ಮಾಡುತ್ತಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News