ರಾಜ್ಯದಲ್ಲಿ 4,439 ಹೊಸ ಕೋವಿಡ್ ಪ್ರಕರಣಗಳು ಪತ್ತೆ; 32 ಮಂದಿ ಸಾವು

Update: 2020-10-25 17:02 GMT

ಬೆಂಗಳೂರು, ಅ.25: ರಾಜ್ಯದಲ್ಲಿ ಇಂದು ಹೊಸದಾಗಿ 4439 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 32 ಮಂದಿ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ, 10,106 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಕರಣಗಳು ಶೇ.4.41ರಷ್ಟಿದ್ದು, ಸೋಂಕಿನಿಂದ ಮೃತಪಟ್ಟವರ ಶೇಕಡವಾರು ಪ್ರಮಾಣ 0.72ಕ್ಕೆ ಇಳಿಕೆಯಾಗಿದೆ.

ಬಾಗಲಕೋಟೆ-41, ಬಳ್ಳಾರಿ-132, ಬೆಳಗಾವಿ-46, ಬೆಂಗಳೂರು ಗ್ರಾಮಾಂತರ-234, ಬೆಂಗಳೂರು ನಗರ-2468, ಬೀದರ್-7, ಚಾಮರಾಜನಗರ-22, ಚಿಕ್ಕಬಳ್ಳಾಪುರ-50, ಚಿಕ್ಕಮಗಳೂರು-36, ಚಿತ್ರದುರ್ಗ-99, ದಕ್ಷಿಣ ಕನ್ನಡ-139, ದಾವಣಗೆರೆ-72, ಧಾರವಾಡ-65, ಗದಗ-22, ಹಾಸನ-103, ಹಾವೇರಿ-9, ಕಲಬುರಗಿ-62, ಕೊಡಗು-35, ಕೋಲಾರ-49, ಕೊಪ್ಪಳ-52, ಮಂಡ್ಯ-86, ಮೈಸೂರು-140, ರಾಯಚೂರು-30, ರಾಮನಗರ-23, ಶಿವಮೊಗ್ಗ-32, ತುಮಕೂರು-141, ಉಡುಪಿ-117, ಉತ್ತರ ಕನ್ನಡ-46, ವಿಜಯಪುರ-49, ಯಾದಗಿರಿ ಜಿಲ್ಲೆಯಲ್ಲಿ 32 ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದಲ್ಲಿ ಒಟ್ಟು 81,050 ಸಕ್ರಿಯ ಪ್ರಕರಣಗಳಿದ್ದು, ಐಸಿಯುನಲ್ಲಿ 939 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 7 ದಿನಗಳಲ್ಲಿ ಹೋಂ ಕ್ವಾರಂಟೈನ್‍ನಲ್ಲಿ 73,948 ಮಂದಿ ಇದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News