ಮೀಲಾದುನ್ನಬಿ ಮಾರ್ಗಸೂಚಿ: ಸರಕಾರದ ವಿರುದ್ಧ ಕಲಬುರಗಿಯಲ್ಲಿ ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ

Update: 2020-10-25 16:25 GMT

ಕಲಬುರಗಿ: ಕೋವಿಡ್-19 ಹಿನ್ನೆಯಲ್ಲಿ ಮೀಲಾದುನ್ನಬಿ ಆಚರಣೆ ಕುರಿತು ರಾಜ್ಯ ಸರಕಾರ ಮತ್ತು ವಕ್ಫ್ ಬೋರ್ಡ್ ಕೆಲವು ನಿಯಮಗಳು ಹೊರತಂದಿದ್ದು, ಇದೀಗ ಈ ನಿಯಮಗಳ ವಿರುದ್ಧ ಕಲಬುರಗಿ ಜಿಲ್ಲೆಯ ಮುಸ್ಲಿಂ ಸಂಘಟನೆಗಳು ಅಸಮಧಾನ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. 

ಮಿಲಾದುನ್ನಬಿ ಪ್ರಯುಕ್ತ ಮೆರವಣಿಗೆಗೆ ನಿಷೇಧ ಹೇರಿದ ರಾಜ್ಯ ವಕ್ಫ್ ಮಂಡಳಿಯ ವಿರುದ್ಧ ಮುಸ್ಲಿಂ ಸಂಘಟನೆಗಳು ಸಂಜೆ 7 ಗಂಟೆಯಿಂದ ನಗರದ ಮುಸ್ಲಿಂ ಚೌಕ್ ನಲ್ಲಿ ಪ್ರತಿಭಟನೆ ನಡೆಸಿ ಮೆರವಣಿಗೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಸದಸ್ಯರಾದ ಡಾ. ಮುಹಮ್ಮದ್ ಅಜಗರ್ ಚುಲಬುಲ್ ಅವರು ಮಾತನಾಡಿ, ವಕ್ಫ್ ಬೋರ್ಡ್ ಹಬ್ಬ ಆಚರಣೆ ನಿಯಮಗಳು ನಾವು ನಂಬುವುದಿಲ್ಲ. ವಕ್ಫ್ ಬೋರ್ಡ್ ರಾಜ್ಯ ಸರಕಾರದ ಕೈಗೊಂಬೆಯಾಗಿದೆ. ಇಸ್ಲಾಮಿಕ್ ಹಬ್ಬ ಆಚರಣೆಗಳ ಕುರಿತು ವಕ್ಫ್ ನಿಯಮ ರೂಪಿಸಿರುವುದು ಖಂಡಿನೀಯ. ನಿಯಮ ನಿಬಂಧನೆಗಳನ್ನು ರಚಿಸುವ ಯಾವುದೇ ಅಧಿಕಾರ ವಕ್ಫ್ ಬೋರ್ಡ್ ಗೆ ಇಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.  

ಮೀಲಾದುನ್ನಬಿ ಪ್ರಯುಕ್ತ ಜಾರಿಗೊಳಿಸಿದ ನೂತನ ನಿಯಮವಳಿಗಳ ಪ್ರತಿಗಳನ್ನು ಪ್ರತಿಭಟನಾಕಾರರು ಹರಿದು ಹಾಕಿದ್ದಲ್ಲದೇ, ಮೆರವಣಿಗೆಗೆ ಮಾಡಿಯೇ ತೀರುತ್ತೇವೆ ಎಂದು ತಿಳಿಸಿದರು. 

ಪ್ರತಿಭಟನೆಯಲ್ಲಿ ನ್ಯಾಯವಾದಿ ವಹಾಜ್ ಬಾಬಾ, ರಹೀಮ್ ಮೀರ್ಚಿ, ಇಮ್ತೀಯಾಜ್ ಸಿದ್ದಿಖಿ, ಮೊಹಮ್ಮದ್ ಕಲೀಮ್  ಸೇರಿದಂತೆ ವಿವಿಧ ಸಂಘಟನೆ ಮುಖಂಡರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News