ಶಿವಮೊಗ್ಗ: ದಸರಾ ಮೆರವಣಿಗೆಗೆ ಚಾಲನೆ; ನಂದಿ ಪೂಜೆಗೆ ವರುಣನ‌ ಅಡ್ಡಿ

Update: 2020-10-26 17:23 GMT

ಶಿವಮೊಗ್ಗ(ಅ.26) :ಶಿವಮೊಗ್ಗದಲ್ಲಿ ವಿಜಯದಶಮಿಗೆ ಅದ್ದೂರಿ ಚಾಲನೆ ನೀಡಲಾಯಿತು.ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಮುಂಭಾಗ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ‌ಮರವಣಿಗೆಗೆ ಚಾಲನೆ ನೀಡಿದರು. ಸಚಿವರಿಗೆ ಮೇಯರ್ ಸುವರ್ಣಾ ಶಂಕರ್, ಉಪಮೇಯರ್  ಸುರೇಖಾ ಮುರಳೀಧರ್, ಪಾಲಿಕೆ ವಿರೋಧ ಪಕ್ಷದ ನಾಯಕ ಹೆಚ್.ಸಿ ಯೋಗೇಶ್, ರಮೇಶ್ ಹೆಗಡೆ,ಆಯುಕ್ತ ಚಿದಾನಂದ್ ಎಸ್ ವಟಾರೆ ಸಾಥ್ ನೀಡಿದರು.

ಮೆರವಣಿಗೆಗೆ ವರುಣನ ಅಡ್ಡಿ:

ಮೆರವಣಿಗೆ ಆರಂಭಕ್ಕೂ ಮುನ್ನ ವರುಣನ ಆರ್ಭಟ ಇತ್ತು. ಇದರಿಂದ ನಂದಿ ಧ್ವಜದ ಪೂಜೆಯು ನಿಧಾನವಾಯಿತು

ಮೆರವಣಿಗೆ ಉದ್ಘಾಟನೆ ಮಧ್ಯಾಹ್ನ 3 ಗಂಟೆಗೆ ನಿಗಧಿಯಾಗಿತ್ತು, ಆದರೆ ಕಾರ್ಯಕ್ರಮ ಒಂದೂವರೆ ಗಂಟೆ ತಡವಾಗಿ ಆರಂಭವಾಯಿತು. ಪಾಲಿಕೆ ಮೇಯರ್,ಉಪಮೇಯರ್,ಜಿಲ್ಲಾ ಉಸ್ತುವಾರಿ ಸಚಿವರು,ಪಾಲಿಕೆ ಸದಸ್ಯರು ಗಳು ಸಂಜೆ 4 ಗಂಟೆಗೆ  ಆಗಮಿಸಿದರು.ಈ ನಡುವೆ ಮಳೆ‌ ಆರಂಭವಾಯಿತು.ಇದರಿಂದ ಮೆರವಣಿಗೆ ತಡವಾಯಿತು.

ಬಾರಿ‌ ಗಾಳಿ‌ಮಳೆಗೆ ಕುಸಿದ ಪೆಂಡಾಲ್

ಭಾರಿ ಗಾಳಿ ಮಳೆಗೆ ಹಳೆ ಜೈಲು ಆವರಣದಲ್ಲಿ ಇರುವ ಬನ್ನಿ ಮಂಟಪದ ಪಕ್ಕದ ಪೆಂಡಾಲ್ ಕುಸಿದು ಬಿದ್ದಿದೆ. ಸೋಮವಾರ ಸಂಜೆ ಸುರಿದ ಬಾರಿ ಮಳೆಗೆ ಪೆಂಡಾಲ್ ಉರುಳಿ ಬಿದ್ದಿದೆ.

ಬನ್ನಿ ಮಂಟಪದ ಪಕ್ಕದಲ್ಲಿ ಪೆಂಡಾಲ್ ನಿರ್ಮಿಸಿ,ಇಲ್ಲಿ ದೇವತೆಗಳನ್ನು ನಿಲ್ಲಿಸಲಾಗಿತ್ತಿತ್ತು. ಗಾಳಿ ಮಳೆಗೆ ಮಂಟಪ ಕುಸಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ  ತೆರವುಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News