ಕೊರೋನ 'ನೆಗೆಟಿವ್' ವರದಿ ನೀಡುತ್ತಿದ್ದ ಆರೋಪ: ಆರೋಗ್ಯ ಸಿಬ್ಬಂದಿ ವಜಾ

Update: 2020-10-27 16:40 GMT

ಬೆಂಗಳೂರು, ಅ.27: ಕೊರೋನ ಪಾಸಿಟಿವ್ ಇದ್ದರೂ ನೆಗೆಟಿವ್ ಎಂದು ವರದಿ ನೀಡುತ್ತಿದ್ದ ಆರೋಪದ ಮೇಲೆ ಬಿಬಿಎಂಪಿಯ ಆರೋಗ್ಯ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ನಗರದ ಪೊಬ್ಬತ್ತಿ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಶಾ ಕಾರ್ಯಕರ್ತೆ ಶಾಂತಿ ಹಾಗೂ ಲ್ಯಾಬ್ ಟೆಕ್ನಿಷಿಯನ್ ಮಹಾಲಕ್ಷ್ಮಿ ಎಂಬುವವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಕೊರೋನ ಸ್ವಾಬ್ ಪರೀಕ್ಷೆಗಳ ಮಾರ್ಗಸೂಚಿಗಳನ್ನು ಪಾಲಿಸದೇ ಲ್ಯಾಬ್ ನೆಗೆಟೀವ್ ವರದಿ ನೀಡಲು 2500 ರೂ.ಗಳ ಹಣವನ್ನು ಪಡೆದು, ಕೊರೋನ ನೆಗೆಟೀವ್ ವರದಿ ನೀಡಿರುವುದು ದೃಢಪಟ್ಟ ಕಾರಣ ಈ ಇಬ್ಬರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಅಲ್ಲದೇ ಪೊಬ್ಬತ್ತಿ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ವೈದಾಧಿಕಾರಿ ಶೈಲಜಾ, ಅವರನ್ನು ಕರ್ತವ್ಯ ನಿರ್ಲಕ್ಷತನ ಹಿನ್ನೆಲೆಯಲ್ಲಿ ಪಾಲಿಕೆ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News