ಕೂಡಗಿ ಗ್ರಾಮದಲ್ಲಿ ಎರಡು ದಿನಗಳಿಂದ ಭೂಮಿ ಕಂಪಿಸಿದ ಅನುಭವ: ಅಧಿಕಾರಿಗಳ ಭೇಟಿ

Update: 2020-10-27 17:00 GMT

ವಿಜಯಪುರ, ಅ.27: ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಭೂಮಿ ಕಂಪಿಸಿದ ಅನುಭವವಾಗುತ್ತಿದ್ದು, ಭಾರೀ ಪ್ರಮಾಣದ ಸ್ಫೋಟಕ ಶಬ್ದವೊಂದು ಕೇಳಿ ಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಈ ಹಿನ್ನೆಲೆ ಕೂಡಗಿ ಗ್ರಾಮಕ್ಕೆ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ಬಳಿಕ ಸ್ಪಷ್ಟನೆ ನೀಡಿದ ಅಧಿಕಾರಿಗಳು ಮನಗೂಳಿ, ಮಸೂತಿ, ಮಲಘಾಣ, ಎನ್‍ಟಿಪಿಸಿ ಟೌನ್‍ಶಿಪ್‍ನಲ್ಲಿ ಇದೇ ರೀತಿಯ ಸ್ಪೋಟಕ ಸದ್ದು ಕೇಳಿ ಬಂದಿದೆ. ಅದೇ ರೀತಿ ಕೂಡಗಿಯಲ್ಲೂ ಕೂಡ ಆಗಿರಬಹುದು. ಈಗಾಗಲೇ ಸ್ಫೋಟಗೊಂಡ ಜಾಗದೆಲ್ಲೆಡೆ ಪರಿಶೀಲನೆ ಮಾಡಲಾಗಿದೆ. ಬೆಂಗಳೂರು ಮತ್ತು ಆಲಮಟ್ಟಿಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರಕ್ಕೆ ವರದಿ ರವಾನಿಸಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News