ಕ್ಯಾಲಿಫೋರ್ನಿಯದಲ್ಲಿ ಕಾಡ್ಗಿಚ್ಚು: ಲಕ್ಷ ಮಂದಿ ಸ್ಥಳಾಂತರ

Update: 2020-10-27 18:39 GMT
ಸಾಂದರ್ಭಿಕ ಚಿತ್ರ

ಲಾಸ್ ಏಂಜಲಿಸ್ (ಅಮೆರಿಕ), ಅ. 27: ಅವೆುರಿಕದ ಕ್ಯಾಲಿಫೋರ್ನಿಯ ರಾಜ್ಯದ ದಕ್ಷಿಣ ಭಾಗದಲ್ಲಿ ವೇಗವಾಗಿ ಕಾಡ್ಗಿಚ್ಚು ಹರಡುತ್ತಿದ್ದು, ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅದೇ ವೇಳೆ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಆದೇಶ ನೀಡಲಾಗಿದೆ.

ಲಾಸ್ ಏಂಜಲಿಸ್ ಸಮೀಪ ಸುಮಾರು 60,000 ಮಂದಿ ಸೋಮವಾರ ತಮ್ಮ ಮನೆಗಳನ್ನು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ.

ಇಲ್ಲಿ ಕಾಡ್ಗಿಚ್ಚು 3,000 ಹೆಕ್ಟೇರ್‌ಗೂ ಅಧಿಕ ಜಮೀನನ್ನು ಆಕ್ರಮಿಸಿದ್ದು, ಆರೇಂಜ್ ಕೌಂಟಿಯ ಹಲವು ಪ್ರಮುಖ ರಸ್ತೆಗಳನ್ನು ಮುಚ್ಚಲಾಗಿದೆ.

ಇರ್ವಿನ್‌ನ ತಪ್ಪಲಲ್ಲಿ ಸೋಮವಾರ ಮುಂಜಾನೆ ಹುಟ್ಟಿಕೊಂಡ ಕಾಡ್ಗಿಚ್ಚು ಬಳಿಕ ಕ್ಷಿಪ್ರವಾಗಿ ಯಾವುದೇ ನಿಯಂತ್ರಣವಿಲ್ಲದೆ ಹರಡಿತು. ಪರಿಸರದಲ್ಲಿ ನೆಲೆಸಿರುವ ಶುಷ್ಕ ವಾತಾವರಣ ಮತ್ತು ಬಲವಾದ ಗಾಳಿ ಬೆಂಕಿ ಹಬ್ಬಲು ಸಹಾಯ ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News