15 ಶೇ. ಕೋವಿಡ್ ಸಾವುಗಳಿಗೆ ಮಲಿನ ವಾಯುವಿನ ನಂಟು

Update: 2020-10-27 18:42 GMT

ಬರ್ಲಿನ್ (ಜರ್ಮನಿ), ಅ. 27: ಜಗತ್ತಿನಾದ್ಯಂತ ಕೋವಿಡ್-19ರಿಂದಾಗಿ ಸಂಭವಿಸುವ ಸಾವುಗಳ ಪೈಕಿ ಸುಮಾರು 15 ಶೇಕಡ ಸಾವುಗಳು, ಸುದೀರ್ಘ ಕಾಲ ಮಲಿನ ಗಾಳಿಯ ಸೇವನೆಯಿಂದಾಗಿ ಸಂಭವಿಸಿರುವ ಸಾಧ್ಯತೆಗಳಿವೆ ಎಂದು ಅಧ್ಯಯನವೊಂದು ತಿಳಿಸಿದೆ.

ಯುರೋಪ್‌ನಲ್ಲಿ, ವಾಯು ಮಾಲಿನ್ಯದೊಂದಿಗೆ ನಂಟು ಹೊಂದಿರುವ ಕೋವಿಡ್-19 ಸಾವುಗಳ ಪ್ರಮಾಣ ಸುಮಾರು 19 ಶೇಕಡವಾಗಿದೆ ಎಂದು ಮ್ಯಾಕ್ಸ್ ಪ್ಲಾಂಕ್ ಇನ್‌ಸ್ಟಿಟ್ಯೂಟ್ ಫಾರ್ ಕೆಮಿಸ್ಟ್ರಿಯ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಉತ್ತರ ಅಮೆರಿಕದಲ್ಲಿ ಈ ಸಂಖ್ಯೆ 17 ಶೇಕಡವಾಗಿದ್ದು, ಪೂರ್ವ ಏಶ್ಯದಲ್ಲಿ 27 ಶೇಕಡವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News