ಮಾನ್ಪಡೆ ಸಾವಿನ ಕುರಿತು ಸದಾನಂದಗೌಡರ ಹೇಳಿಕೆ ನಾಚಿಕೆಗೇಡಿತನದ್ದು: ಮಾಜಿ ಸಚಿವ ಪ್ರಿಯಾಂಕ್ ಖರ್ಗೆ

Update: 2020-10-28 11:40 GMT

ಕಲಬುರಗಿ, ಅ.28: ಜನಪರ-ರೈತಪರ ಹೋರಾಟಗಾರ ಮಾರುತಿ ಮಾನ್ಪಡೆ ಸಾವಿನ ಕುರಿತು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಹೇಳಿಕೆ ನಾಚಿಕೆಗೇಡಿತನದ್ದು ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕೇಂದ್ರ ಸರಕಾರ ಜಾರಿಗೆ ತಂದ ರೈತ ವಿರೋಧಿ ಮಸೂದೆಗಳ ವಿರುದ್ಧ ಮಾನ್ಪಡೆಯವರು ಹೋರಾಡುತ್ತಲೇ ಬಂದಿದ್ದರು. ಕೊರೋನ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಲಜ್ಜೆಗೆಟ್ಟ ಬಿಜೆಪಿ ಸರಕಾರ ರೈತ ವಿರೋಧಿ ಮಸೂದೆ ಜಾರಿಗೆ ತಂದಾಗ ಮಾನ್ಪಡೆಯವರು ಹೋರಾಟಕ್ಕಿಳಿದಿದ್ದರು. ಆದರೆ ಈಗ ಅವರ ಸಾವಿನ ಕುರಿತಾಗಿ ಕೇಂದ್ರ ಸಚಿವರ ಹೇಳಿಕೆ ನಾಚಿಕೆಗೇಡಿತನದ್ದು ಎಂದು ಕಿಡಿಕಾರಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಬಿಜೆಪಿ ಸರಕಾರದ ಕೊಡುಗೆ ಏನು ಎಂದು ತಿಳಿಸಲಿ, ನೆರೆ ಹಾವಳಿ ಸಂದರ್ಭದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಯಾಕೆ ಭೇಟಿ ನೀಡಲಿಲ್ಲ ಎಂದು ಸದಾನಂದ ಗೌಡರನ್ನು ಕುಟುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News