ರಾಜ್ಯೋತ್ಸವ ದಿನದಂದು ಕರಾಳ ದಿನ ಆಚರಿಸುವುದಾಗಿ ಎಂಇಎಸ್ ಪಟ್ಟು: ಕನ್ನಡಿಗರ ಆಕ್ರೋಶ

Update: 2020-10-28 13:11 GMT

ಬೆಳಗಾವಿ, ಅ.28: ಎಂಇಎಸ್ ನಾಯಕರು ರಾಜ್ಯೋತ್ಸವದ ದಿನದಂದು ಕರಾಳದ ದಿನ ಆಚರಿಸುವ ನಿರ್ಣಯವನ್ನು ಮತ್ತೊಮ್ಮೆ ಮಂಡಿಸಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದ ಗೋವಾವೇಸ್ ಬಳಿಯಿರುವ ಮರಾಠಾ ಮಂಗಲ ಕಾರ್ಯಾಲಯದಲ್ಲಿ ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸಭೆಯಲ್ಲಿ ನವೆಂಬರ್ 1ರಂದು ಕರಾಳ ದಿನವನ್ನಾಗಿ ಆಚರಿಸುವ ಬಗ್ಗೆ ನಿರ್ಣಯ ಕೈಗೊಂಡಿದ್ದಾರೆ. ಈ ವೇಳೆ ಎಂಇಎಸ್ ಮುಖಂಡರು, ನ.1 ರಂದು ಕರಾಳ ದಿನ ಆಚರಿಸಲು ಅನುಮತಿ ನೀಡದಿದ್ದರೆ ಕೇಂದ್ರ ಸರಕಾರದ ವಿರುದ್ಧ ಧರಣಿ ನಡೆಸಲು ನಿರ್ಧಾರ ಮಾಡಿದ್ದಾರೆ.

ಕೊರೋನ ಹಿನ್ನೆಲೆ ಹೆಚ್ಚು ಜನರು ಸೇರಲು ಅವಕಾಶವಿಲ್ಲದ ಕಾರಣ ಎಂಇಎಸ್‍ಗೆ ಸೈಕಲ್ ರ‍್ಯಾಲಿ ನಡೆಸಲು ಅನುಮತಿಯನ್ನು ನೀಡಿಲ್ಲ. ಆದ್ದರಿಂದ ತೀವ್ರ ಅಸಮಾಧಾನಕ್ಕೊಳಗಾದ ಎಂಇಎಸ್ ಯಾವುದೇ ಕಾರಣಕ್ಕೂ ತಮ್ಮ ಪಟ್ಟನ್ನ ಸಡಲಿಸದೆ, ನಾವೂ ಪ್ರಜಾಪ್ರಭುತ್ವದ ನಿಯಮದಂತೆ ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ. ನ.1 ರಂದು ಹಲವಾರು ವರ್ಷಗಳಿಂದ ಕರಾಳ ದಿನ ಆಚರಿಸುತ್ತ ಬಂದಿದ್ದೇವೆ. ಈ ಬಾರಿಯೂ ಯಾವುದೇ ಕಾರಣಕ್ಕೂ ನಮ್ಮ ನಿರ್ಣಯವನ್ನ ನಾವೂ ಬದಲಿಸುವುದಿಲ್ಲ. ಕರಾಳ ದಿನವನ್ನ ಆಚರಿಸಲು ಅಡೆತಡೆ ಉಂಟುಮಾಡುತ್ತಿರುವ ಕರ್ನಾಟಕದ ಪೊಲೀಸರಿಗೆ ದೇವರು ಬುದ್ಧಿ ನೀಡಲಿ ಎಂದು ಎಂಇಎಸ್‍ನ ಅಧ್ಯಕ್ಷ ದೀಪಕ ದಳವಿ ತಿಳಿಸಿದ್ದಾರೆ.

ಕಠಿಣ ಕ್ರಮ

ಎಂಇಎಸ್ ಮುಖಂಡರಿಗೆ ಈ ವರ್ಷ ಯಾವುದೇ ಕಾರಣಕ್ಕೂ ಕರಾಳದಿನ ಆಚರಿಸಲು ಅನುಮತಿ ನೀಡುವುದಿಲ್ಲ. ಒಂದು ವೇಳೆ ಕರಾಳ ದಿನ ಆಚರಣೆಗೆ ಎಂಇಎಸ್ ಮುಂದಾದರೆ ಕಠಿಣ ಕ್ರಮಕೈಗೊಳ್ಳಲಾಗುವುದಾಗಿ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ.

-ಕೆ.ತ್ಯಾಗರಾಜನ್, ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News