ಎಲ್ಲ ಭಾರತೀಯರು ಕೊರೋನ ವೈರಸ್ ಲಸಿಕೆ ಪಡೆಯಲಿದ್ದಾರೆ: ಪ್ರಧಾನಿ ಮೋದಿ

Update: 2020-10-29 06:13 GMT

ಹೊಸದಿಲ್ಲಿ: ಕೊರೋನ ವೈರಸ್ ಲಸಿಕೆ ಲಭ್ಯವಾದ ಬಳಿಕ ಎಲ್ಲ ಭಾರತೀಯರಿಗೆ ಲಸಿಕೆ ನೀಡಲಾಗುವುದು ಎಂದು ರಾಷ್ಟ್ರಕ್ಕೆ ಭರವಸೆ ನೀಡಲು ಬಯಸುತ್ತೇನೆ. ಯಾರನ್ನೂ ಲಸಿಕೆಯಿಂದ ಕೈಬಿಡುವ ಪ್ರಶ್ನೆ ಇಲ್ಲ. ಲಸಿಕೆಯ ವಿತರಣೆಯನ್ನು ನಿರ್ವಹಿಸಲು ಹಾಗೂ ಮಾರ್ಗವನ್ನು ಗುರುತಿಸಲು ರಾಷ್ಟ್ರೀಯ ತಜ್ಞರ ಗುಂಪನ್ನು ರಚಿಸಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

'ದಿ ಎಕಾನಮಿಕ್ಸ್ ಟೈಮ್ಸ್'‌ಗೆ ನೀಡಿದ ಸಂದರ್ಶನದಲ್ಲಿ ಮೋದಿ ಈ ಭರವಸೆ ನೀಡಿದರು.

ಸಹಜವಾಗಿ ಆರಂಭದಲ್ಲಿ ಅತ್ಯಂತ ದುರ್ಬಲ ಹಾಗೂ ಕೊರೋನ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಕೊರೋನ ವಾರಿಯರ್ಸ್‌ಗೆ ಲಸಿಕೆ ನೀಡಲಾಗುವುದು. ಕೊರೋನ ವೈರಸ್ ಲಸಿಕೆ ತಯಾರಿಕೆಯ ಕೆಲಸ ಇನ್ನೂ ಪ್ರಗತಿಯಲ್ಲಿದೆ. ಟ್ರಯಲ್ಸ್‌ಗಳು ನಡೆಯುತ್ತಿದೆ ಎಂದು ಹೇಳಿದರು.

 ಜಾಗತಿಕವಾಗಿ ಸುಮಾರು 150 ಕೊರೋನ ವೈರಸ್ ಲಸಿಕೆಗಳು ವಿವಿಧ ಹಂತಗಳಲ್ಲಿ ಕ್ಲಿನಿಕಲ್ ಟ್ರಯಲ್ಸ್‌ನಲ್ಲಿದೆ. ಭಾರತದಲ್ಲಿ ಕೋವಾಕ್ಸಿನ್ ಹಾಗೂ ಝಿಡಸ್ ಕಾಡಿಲಾ ಸಹಿತ ಎರಡು ಲಸಿಕೆಗಳು ಕ್ಲಿನಿಕಲ್ ಟ್ರಯಲ್‌ನಲ್ಲಿವೆ. ಭಾರತವು ಆಕ್ಸ್‌ಫರ್ಡ್-ಅಸ್ಟ್ರಾಝೆನಿಕಾ ಕೊರೋನ ವೈರಸ್ ಲಸಿಕೆಯ ಕ್ಲಿನಿಕಲ್ ಟ್ರಯಲ್ಸ್‌ನ್ನು ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News