ಶಾಸಕ ಟಿ.ವೆಂಕಟರಮಣಯ್ಯಗೆ ಕೊರೋನ ಸೋಂಕು ದೃಢ

Update: 2020-10-29 13:49 GMT

ಬೆಂಗಳೂರು, ಅ.29: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಶಾಸಕ ಟಿ.ವೆಂಕಟರಮಣಯ್ಯ ಅವರಿಗೆ ಕೊರೋನ ಪಾಸಿಟಿವ್ ವರದಿಯಾಗಿದ್ದು, ಅವರು ಹೋಂ ಐಸೋಲೇಷನ್‍ಗೆ ಒಳಗಾಗಿದ್ದಾರೆ.

ಶಾಸಕರಿಗೆ ಸೋಂಕಿನ ಲಕ್ಷಣಗಳು ಕಂಡು ಬಂದ ಕಾರಣ ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ಸೋಂಕು ಬಾಧಿಸಿರುವುದು ಖಾತ್ರಿಯಾಗಿದೆ. ನನ್ನ ಆರೋಗ್ಯ ಸ್ಥಿರವಾಗಿದ್ದು ಕ್ಷೇತ್ರದ ಜನರಿಗೆ ಆತಂಕ ಬೇಡ. ಹೋಮ್ ಐಸೋಲೇಷನ್‍ಗೆ ಒಳಗಾಗಿ ಅಲ್ಲಿಯೇ ಚಿಕಿತ್ಸೆ ಪಡೆಯುತ್ತೇನೆ. 15 ದಿನಗಳವರೆಗೂ ಯಾರೂ ನನ್ನನ್ನು ಭೇಟಿ ಮಾಡಬೇಡಿ. ನನ್ನ ಸಂಪರ್ಕದಲ್ಲಿದ್ದವರು ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ' ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News