ರೈಲುಗಳಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ 'ಮೇರಿ ಸಹೇಲಿ' ಯೋಜನೆ ಆರಂಭ

Update: 2020-10-29 17:09 GMT

ಹುಬ್ಬಳ್ಳಿ, ಅ.29: ರೈಲುಗಳಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಹುಬ್ಬಳ್ಳಿ ವಿಭಾಗದ ಆರ್‍ಪಿಎಫ್ ‘ಮೇರಿ ಸಹೇಲಿ’ ಯೋಜನೆಯನ್ನು ಪ್ರಾರಂಭಿಸಿದೆ.

ಹಬ್ಬದ ಋತುವಿನ ದೃಷ್ಟಿಯಿಂದ ವಿಶೇಷ ರೈಲು ಸೇವೆಗಳನ್ನು ನಡೆಸಲಾಗುತ್ತಿರುವುದರಿಂದ ಮತ್ತು ಮಹಿಳೆಯರ ರಕ್ಷಣೆಯ ನಿಟ್ಟಿನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಹುಬ್ಬಳ್ಳಿ ವಿಭಾಗದ 4 ಜೋಡಿ ರೈಲುಗಳಲ್ಲಿ ಈ 'ಮೇರಿ ಸಹೇಲಿ' ಯೋಜನೆಯನ್ನು ಪರಿಚಯಿಸಲಾಗಿದೆ.

ರೈಲು ಸಂಖ್ಯೆ: 07305/02779-02780/07306 ಹುಬ್ಬಳ್ಳಿ/ವಾಸ್ಕೋ ಡಾ-ಗಾಮಾ-ಹಜರತ್ ನಿಜಾಮುದ್ದೀನ್-ಹುಬ್ಬಳ್ಳಿ/ವಾಸ್ಕೋ ಡಾ ಗಾಮಾ ಎಕ್ಸ್‍ಪ್ರೆಸ್ ವಿಶೇಷ ರೈಲು

ರೈಲು ಸಂಖ್ಯೆ: 07317/07318 ಹುಬ್ಬಳ್ಳಿ-ಲೋಕಮಾನ್ಯ ತಿಲಕ್ ಟರ್ಮಿನಸ್-ಹುಬ್ಬಳ್ಳಿ ಎಕ್ಸ್‍ಪ್ರೆಸ್ ವಿಶೇಷ ರೈಲು

ರೈಲು ಸಂಖ್ಯೆ: 07225/07226 ಹುಬ್ಬಳ್ಳಿ-ವಿಜಯವಾಡ-ಹುಬ್ಬಳ್ಳಿ ಎಕ್ಸ್‍ಪ್ರೆಸ್ ವಿಶೇಷ ರೈಲು

ರೈಲು ಸಂಖ್ಯೆ: 01140/01139 ಗದಗ್-ಮುಂಬೈ ಸಿಎಸ್‍ಎಂಟಿ-ಗದಗ ಎಕ್ಸ್‍ಪ್ರೆಸ್ ವಿಶೇಷ ರೈಲಿನಲ್ಲಿ ‘ಮೇರಿ ಸಹೇಲಿ’ ಯನ್ನು ಆರಂಭಿಸಲಾಗಿದೆ.

ಈ ಯೋಜನೆಯಡಿಯಲ್ಲಿ ಆರಂಭಿಕ ನಿಲ್ದಾಣಗಳಲ್ಲಿ ಮಹಿಳಾ ಸಬ್ ಇನ್‍ಸ್ಪೆಕ್ಟರ್ ಮತ್ತು ಲೇಡಿ ಕಾನ್‍ಸ್ಟೇಬಲ್‍ಗಳ ತಂಡವನ್ನು ರಚಿಸಲಾಗಿದೆ. ರೈಲುಗಳು ಪ್ರಾರಂಭವಾಗುವ ಮೊದಲು, ಈ ತಂಡವು ಎಲ್ಲಾ ಪ್ರಯಾಣಿಕರ ಬೋಗಿಗಳನ್ನು ಪ್ರವೇಶಿಸುತ್ತದೆ ಮತ್ತು ಮಹಿಳಾ ಪ್ರಯಾಣಿಕರನ್ನು ಅದರಲ್ಲೂ ವಿಶೇಷವಾಗಿ ಏಕಾಂಗಿಯಾಗಿ ಪ್ರಯಾಣಿಸುವ ಮಹಿಳೆಯರನ್ನು ಗುರುತಿಸಿ ವಿಚಾರಿಸಿಕೊಳ್ಳುತ್ತದೆ.

ಈ ತಂಡವು ಮಹಿಳಾ ಪ್ರಯಾಣಿಕರಿಗೆ ತಮ್ಮ ಪ್ರಯಾಣದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿಸುತ್ತದೆ ಮತ್ತು ಪ್ರಯಾಣದ ಸಮಯದಲ್ಲಿ ಯಾವುದೇ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಅವರು ಎದುರಿಸಿದರೆ ಅಥವಾ ನೋಡಿದರೆ 182 ಭದ್ರತಾ ಸಹಾಯ ಮಾರ್ಗವನ್ನು ಸಂಪರ್ಕಿಸಬಹುದು ಎಂದು ತಿಳಿಸುತ್ತದೆ.

ಹುಬ್ಬಳ್ಳಿ ವಿಭಾಗಕ್ಕೆ mysaheliubl@gmail.com ಎಂದು ಇಮೇಲ್ ಐಡಿ ರಚಿಸಲಾಗಿದೆ ಮತ್ತು ಭದ್ರತಾ ಸಹಾಯಕ್ಕಾಗಿ 7022626987 ಮೊಬೈಲ್ ಸಂಖ್ಯೆಗೆ ಸಂಪರ್ಕಿಸುವಂತೆ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News