ಬೆಳೆಗಳ ವಿಮಾ ಕಂತು ತುಂಬಲು ಅರ್ಜಿ ಆಹ್ವಾನ

Update: 2020-10-29 17:19 GMT

ಬೆಂಗಳೂರು, ಅ.29: ಅಯಾ ಜಿಲ್ಲೆಯಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ 2020-21 ನೇ ಸಾಲಿನಲ್ಲಿ ಮಳೆಯಾಶ್ರಿತ ಹಾಗೂ ನೀರಾವರಿಯಾಶ್ರಿತ 14 ಬೆಳೆಗಳಿಗೆ ಹಾಗೂ ಬೇಸಿಗೆ ಹಂಗಾಮಿಗೆ ಮೂರು ಬೆಳೆಗಳ ವಿಮಾ ಕಂತು ತುಂಬಲು ಅರ್ಜಿ ಆಹ್ವಾನಿಸಲಾಗಿದೆ.

ತಾಲೂಕವಾರು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯತ್ ಮಟ್ಟ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ ಹೊರಗಿರುವ ಪಟ್ಟಣ, ನಗರ, ವ್ಯಾಪ್ತಿಗೆ ಬರುವ ಗ್ರಾಮಗಳನ್ನು ಸೇರಿದಂತೆ ಇತರೆ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅಳವಡಿಸಿ ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿದೆ. ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ, ಪಹಣಿ, ಖಾತೆ ಪುಸ್ತಕ, ಪಾಸ್ ಬುಕ್, ಕಂದಾಯ ರಶೀದಿ, ಆಧಾರ್ ಸಂಖ್ಯೆ, ಆಧಾರ ನೊಂದಣಿ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಬೇಕು.

ವಿಮಾ ನೊಂದಣಿ ಮಾಡುವ ಎಲ್ಲಾ ರೈತರು ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು ವಿನಂತಿಸಿದೆ. ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಇಚ್ಚಿಸುವರು ವಾಣಿಜ್ಯ ಬ್ಯಾಂಕ್, ಪ್ರಾಂತೀಯ ಗ್ರಾಮೀಣ ಬ್ಯಾಂಕ್, ಪ್ರಾಥಮಿಕ ಕೃಷಿ ಸಹಕಾರ ಸಂಘಗಳು, ಬ್ಯಾಂಕುಗಳ ಮೂಲಕವೇ ಸಾಮಾನ್ಯ ಸೇವಾ ಕೇಂದ್ರ(ಕಾಮನ್ ಸರ್ವಿಸ್ ಸೇಂಟರ್) ಮೂಲಕ ನೋಂದಾಯಿಸಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶರ ಕಚೇರಿಗಳಿಗೆ ಸಂಪರ್ಕಿಸಬೇಕು.

ಹಿಂಗಾರು ಹಂಗಾಮಿಗೆ: ನೀರಾವರಿ ಜೋಳ, ಈರುಳ್ಳಿ ಹಾಗೂ ಮಳೆಯಾಶ್ರಿತ ಜೋಳ, ಕುಸಬೆ, ರ್ಸೂಕಾಂತಿ, ಟೋಮ್ಯಾಟೋ ಬೆಳೆಗಳ ವಿಮೆ ಕಂತು ತುಂಬಲು ನ.30 ಕೊನೆಯ ದಿನಾಂಕವಾಗಿದೆ. ಮಳೆಯಾಶ್ರಿತ ಕಡಲೆ, ಗೋಧಿ ಹಾಗೂ ನೀರಾವರಿ ಸೂರ್ಯಕಾಂತಿ, ಕಡಲೆ ಬೆಳೆಗೆ ವಿಮೆ ಕಂತು ತುಂಬಲು ಡಿ.16 ಕೊನೆಯ ದಿನಾಂಕವಾಗಿದೆ. ಮಳೆಯಾಶ್ರಿತ ಉದ್ದು, ಹೆಸರು , ಹುರುಳಿ ಹಾಗೂ ನೀರಾವರಿ ಮುಸುಕಿನ ಜೋಳದ ಬೆಳೆ ವಿಮೆ ಕಂತು ತುಂಬಲು ಡಿ.31 ಕೊನೆಯ ದಿನಾಂಕವಾಗಿದೆ. ಬೇಸಿಗೆ ಹಂಗಾಮಿಗೆ ನೀರಾವರಿ ಶೇಂಗಾ, ಭತ್ತ ಹಾಗೂ ಸೂರ್ಯಕಾಂತಿಗೆ ವಿಮೆ ಕಂತು ತುಂಬಲು 2021ರ ಜ.3 ಕೊನೆಯ ದಿನಾಂಕವಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News