ಕೆ. ಮಲ್ಲಪ್ಪರವರ ಆದರ್ಶ ಸಮಾಜಕ್ಕೆ ದಾರಿದೀಪ: ನಿರಂಜನಾನಂದಪುರಿ ಸ್ವಾಮೀಜಿ

Update: 2020-10-30 15:20 GMT

ದಾವಣಗೆರೆ: ಕೆ. ಮಲ್ಲಪ್ಪನವರ ಆದರ್ಶ ಸಮಾಜಕ್ಕೆ ದಾರಿದೀಪವಾಗಬೇಕಿದೆ. ಅವರ ಹಾದಿಯಲ್ಲಿ ಸಮಾಜ ನಡೆದಾಗ ಮಾತ್ರ ಅವರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರುಗಳಾದ ಶ್ರೀ ನಿರಂಜನಾನಂದಪುರಿ ಸ್ವಾಮಿಗಳು ಹೇಳಿದರು. 

ನಗರದ ಶ್ರೀ ಬೀರೇಶ್ವರ ಭವನದಲ್ಲಿ ದಿವಂಗತ ಮಾಜಿ ಶಾಸಕ ಮಲ್ಲಪ್ಪನವರ ಶ್ರದ್ಧಾಂಜಲಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. 

ರಾಜ್ಯಕ್ಕೆ ಜಿಲ್ಲೆಗೆ ಸಮಾಜಕ್ಕೆ ಕೆ.ಮಲ್ಲಪ್ಪನವರು ಒಂದು ಶಕ್ತಿಯಾಗಿದ್ದರು. ಅವರ ಅಗಲಿಕೆಯಿಂದ ಸಮಾಜ ದೊಡ್ಡ ಶಕ್ತಿ ಕಳೆದುಕೊಂಡಿದೆ. ನಾವು ಇಂದು ಸ್ವಾಮೀಜಿಯಾಗಲು ಮಲ್ಲಪ್ಪನವರೇ ಕಾರಣ. 1991ರಲ್ಲಿ ನಮ್ಮ ತಂದೆಯವರಿಗೆ ಹೇಳಿ ದತ್ತು ಪಡೆದರು. ಹಾಗೂ ಅಂದಿನ ದಿನ ಮಲ್ಲಪ್ಪನವರು ನಮ್ಮ ತಂದೆಗೆ ಬರೆದ ಪತ್ರದಿಂದ ನಾವು ಜಗದ್ಗುರುಗಳಾಗಲು ಕಾರಣವಾಗಿದೆ ಎಂದು ಸ್ಮರಿಸಿದರು. 

ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಕಾಗಿನೆಲೆ ಕನಕಗುರುಪೀಠದ ಸ್ಥಾಪನೆಗೆ ಮಲ್ಲಪ್ಪನವರ ಶ್ರಮ ಕೂಡ ಮರೆಯುವಂತದ್ದಲ್ಲ. ಅವರ ಸಾಮಾಜಿಕ ಕಳಕಳಿ ಯಾವಾಗಲೂ ಸಮಾಜದ ಶೋಷಿತರ ಬಗ್ಗೆ ಅಪಾರ ಕಾಳಜಿ ವಹಿಸುತ್ತಿದ್ದರು. ಹರಿಹರ ತಾಲೂಕಿನ ಡಾ. ಕೆಪಿ ಸಿದ್ದಬಸಪ್ಪ ಡಾ.ವೈ ನಾಗಪ್ಪ ಇವರುಗಳ ಅಗಲಿಕೆಯಿಂದ ಸಮಾಜಕ್ಕೆ ಅನಾಥಪ್ರಜ್ಞೆ ಕಾಡುವಂತಾಗಿದೆ ಎಂದರು. 

ಚಂದ್ರಗಿರಿ ಅಥಣಿ ಮಠದ ಮುರಳೀಧರ ಸ್ವಾಮೀಜಿ ಮಾತನಾಡಿ, ಕೆ. ಮಲ್ಲಪ್ಪ ಜನ ಸೇವಕರಾಗಿ ಮುಕ್ತಿ ಹೊಂದಿದ್ದಾರೆ. ಜನ ಸೇವೆ, ಸಮಾಜ ಸೇವೆ ದೇವರ ಸೇವೆಯೆಂದು ತಿಳಿದು ಕಾಯಕಯೋಗಿ ಆಗಿದ್ದರು ಎಂದರು. 

ಮಾಜಿ ವಿಪ ಸದಸ್ಯ ಡಾ.ಎ.ಹೆಚ್. ಶಿವಯೋಗಿ ಸ್ವಾಮಿ ಮಾತನಾಡಿ, ಮಲ್ಲಪ್ಪನವರು ಸರಳ ಸಜ್ಜನಿಕೆಯ ವ್ಯಕ್ತಿ. ಸಮಾಜಕ್ಕೆ ದೇಶಕ್ಕೆ ರಾಜ್ಯಕ್ಕೆ ಅವರ ಅಗಲಿಕೆಯಿಂದ ನಷ್ಟವುಂಟಾಗಿದೆ ಎಂದು ಹೇಳಿದರು.  

ಮಾಜಿ ಸಚಿವ ಎಸ್ ಎಸ್. ಮಲ್ಲಿಕಾರ್ಜುನ್, ನಗರ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಬಳ್ಳಾರಿ ಷಣ್ಮುಖಪ್ಪ, ದೂಡ ಮಾಜಿ ಅಧ್ಯಕ್ಷ ದಾಸ ಕರಿಯಪ್ಪ, ನಗರ ಕುರುಬ ಸಂಘದ ಉಪಾಧ್ಯಕ್ಷ ಗೌಡ್ರು ಚನ್ನಬಸಪ್ಪ, ವಾರ್ತಾ ಇಲಾಖೆಯ ನಿವೃತ್ತ ವಾರ್ತಾಧಿಕಾರಿ ಎಂ. ಕರಿಯಪ್ಪ, ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ  ಕೆಂಗೋ ಹನುಮಂತಪ್ಪ, ಎಚ್‍ಪಿ ಗೋಣಪ್ಪ, ಜೆ.ಕೆ. ಕೊಟ್ರಬಸಪ್ಪ  ಕೆ ಮಲ್ಲಪ್ಪನವರ ಪುತ್ರ ಕೆ. ವಿವೇಕ್, ಅಳಿಯ ಕೆ. ಓಂಕಾರಪ್ಪ, ಮಾಜಿ ಜಿಪಂ ಅಧ್ಯಕ್ಷ ದ್ಯಾಮಣ್ಣ, ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಕುಂಬಳೂರು ವಿರೂಪಾಕ್ಷಪ್ಪ, ಕಾರ್ಯದರ್ಶಿ ಮಳಲ್ಕೆರೆ ಎಸ್.ಹೆಚ್. ಪ್ರಕಾಶ್, ಪಾಲಿಕೆ ಸದಸ್ಯರಾದ ಜೆ.ಎನ್. ಶ್ರೀನಿವಾಸ್, ಎ. ನಾಗರಾಜ್, ದೇವರಮನೆ ಶಿವಕುಮಾರ್,  ದಿನೇಶ್ ಕೆ. ಶೆಟ್ಟಿ,  ಇಟ್ಟಿಗುಣಿ ಮಂಜುನಾಥ್ ಇತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News