ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಂಪಿ ಕನ್ನಡ ವಿವಿ ಪುಸ್ತಕಗಳಿಗೆ ಶೇ.50 ರಿಯಾಯಿತಿ

Update: 2020-10-30 18:09 GMT

ಬೆಂಗಳೂರು, ಅ.30: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಪ್ರಕಟಿಸಿರುವ ಎಲ್ಲ ಪುಸ್ತಕಗಳಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ನ.1ರಿಂದ 30ರವರೆಗೆ ಈ ಸೌಲಭ್ಯವಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ-76, ಹೊಸಪೇಟೆ ತಾಲೂಕು, ಬಳ್ಳಾರಿ ಜಿಲ್ಲೆ, ಹಾಗೂ ಪುಸ್ತಕ ಮಾರಾಟ ಮಳಿಗೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಪ್ರಾದೇಶಿಕ ಕಚೇರಿ ನಂ.1, ಕಾನೂನು ಕಾಲೇಜು ಹಳೆಯ ಕಟ್ಟಡ, ಅರಮನೆ ರಸ್ತೆ, ಮೈಸೂರು ಬ್ಯಾಂಕ್ ವೃತ್ತ ಬೆಂಗಳೂರು-09 ಈ ಕಚೇರಿಗಳಿಂದ ಪಡೆಯಬಹುದಾಗಿದೆ. ದೂ.94492-62647, 94496-30606ಕ್ಕೆ ಸಂಪರ್ಕಿಸಲು ಪ್ರಸಾರಾಂಗದ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News