ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳ ರದ್ದು ಸೇರಿ 20 ಅಂಶಗಳ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಒತ್ತಾಯ

Update: 2020-10-31 13:28 GMT

ಬೆಂಗಳೂರು, ಅ. 31: `ಕನ್ನಡ ಮಾಧ್ಯಮ ಶಿಕ್ಷಣದ ಸಾರ್ವತ್ರಿಕರಣ, ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರ ರದ್ದತಿ, ಇಂಗ್ಲಿಷ್ ಎರಡನೆಯ ಭಾಷೆಯಾಗಿ ಕಲಿಕೆ, ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳ ರದ್ದು' ಸೇರಿದಂತೆ 65ನೆ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕನ್ನಡ ಬಲವರ್ಧನೆಗೆ ಇಪ್ಪತ್ತು ಅಂಶಗಳ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತರಬೇಕು ಎಂದು ಕನ್ನಡ ಸಂಘರ್ಷ ಸಮಿತಿ ಆಗ್ರಹಿಸಿದೆ.

`ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸರಕಾರ ಮತ್ತು ಖಾಸಗಿ ಉದ್ಯೋಗದ ಖಾತರಿ, ಕೇಂದ್ರದ ಕೈಗಾರಿಕೆ, ರೈಲ್ವೆ, ಅಂಚೆ, ಬ್ಯಾಂಕ್ ಸೇರಿದಂತೆ ಇತ್ಯಾದಿ ನೇಮಕಾತಿಯಲ್ಲಿ ಕನ್ನಡ ಪ್ರಶ್ನೆ ಪತ್ರಿಕೆ ಕಡ್ಡಾಯ, ರಾಜ್ಯ ಪ್ರತಿನಿಧಿಸುವ ಕೇಂದ್ರದ ಮಂತ್ರಿಗಳು, ಸಂಸದರು ಕನ್ನಡದಲ್ಲೇ ಪ್ರಶ್ನೆ ಕೇಳಿ, ಕನ್ನಡದಲ್ಲೆ ಉತ್ತರಿಸಬೇಕು. ರಾಜ್ಯ ಸೇವೆಗೆ ಬರುವ ಎಲ್ಲ ಅಧಿಕಾರಿಗಳು ಕನ್ನಡದಲ್ಲೆ ವ್ಯವಹಾರ ನಡೆಸಬೇಕು'.

`ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತ್, ವಿಧಾನಸಭೆ, ಲೋಕಸಭೆ, ರಾಜ್ಯಸಭೆಗೆ ಸ್ಪರ್ಧಿಸಲು ಕನ್ನಡ ಮಾಧ್ಯಮದಲ್ಲೆ ಎಸೆಸೆಲ್ಸಿವರೆಗೆ ವ್ಯಾಸಂಗ ಕಡ್ಡಾಯ. ರೈತರಲ್ಲದವರು ರಾಜ್ಯದ ಜಮೀನು ಖರೀದಿಗೆ ನಿರ್ಬಂಧ, ನಿತ್ಯ ವ್ಯವಹಾರದಲ್ಲಿ ಕನ್ನಡವೇ ಪ್ರಧಾನ, ಕನ್ನಡ ಅಂಕಿಗಳ ವ್ಯಾಪಕ ಬಳಕೆ, ಕನ್ನಡಪರ ಹೋರಾಟಗಾರರ ನಿಂದನೆಗೆ ಕಡಿವಾಣ ಹಾಗೂ ಕೀಳರಿಮೆಯ ಜಾಢ್ಯಕ್ಕೆ ಕನ್ನಡ ಆತ್ಮವಿಶ್ವಾಸ, ಸ್ವಾಭಿಮಾನದ ಅಂಕುಶ'. ಮೇಲ್ಕಂಡ ಅಂಶಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಸಮಿತಿ ಅಧ್ಯಕ್ಷ ಡಾ.ಕೋ.ವೆಂರಾಮಕೃಷ್ಣೇಗೌಡ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News