ನ.18 ರಿಂದ ಕಲಬುರಗಿ- ದಿಲ್ಲಿ ವಿಮಾನಯಾನ ಆರಂಭ

Update: 2020-10-31 14:15 GMT
ಸಾಂದರ್ಭಿಕ ಚಿತ್ರ

ಕಲಬುರಗಿ, ಅ.31: ನವೆಂಬರ್ 18 ರಿಂದ ವಾರದ ಮೂರು ದಿನಗಳ ಕಾಲ ಸ್ಟಾರ್ ಏರ್ ಸಂಸ್ಥೆ ದಿಲ್ಲಿಗೆ ವಿಮಾನಯಾನ ಆರಂಭಿಸುತ್ತಿದೆ. ಈ ಬಗ್ಗೆ ಸ್ಟಾರ್ ಏರ್ ತನ್ನ ಆಫೀಸಿಯಲ್ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.

ಕಲಬುರಗಿ-ಬೆಂಗಳೂರು ವಿಮಾನ ಹಾರಾಟಕ್ಕೆ ಈ ಭಾಗದ ಜನರ ಉತ್ತಮ ಸ್ಪಂದನೆ ವ್ಯಕ್ತವಾದ ಬೆನ್ನಲ್ಲೇ ಇದೀಗ ಕಲಬುರಗಿ-ದಿಲ್ಲಿ(ಹಿಂಡಾನ್)ಗೆ ನವೆಂಬರ್ 18 ರಿಂದ ವಿಮಾನ ಹಾರಾಟ ಪ್ರಾರಂಭಿಸುತ್ತಿದೆ. ಪ್ರತಿ ಮಂಗಳವಾರ, ಬುಧವಾರ ಹಾಗೂ ಶನಿವಾರ ಮೂರು ದಿನಗಳ ಕಾಲ ಬೆಳಗ್ಗೆ 10:20 ಕ್ಕೆ ಕಲಬುರಗಿ ವಿಮಾನ ನಿಲ್ದಾಣದಿಂದ ಹೊರಟು 12:40 ಕ್ಕೆ ದಿಲ್ಲಿ(ಹಿಂಡಾನ್)ಗೆ ತಲುಪಲಿದೆ.

ವಾರದ ಅದೇ ಮೂರು ದಿನ ದಿಲ್ಲಿಯಿಂದ 01:10 ಕ್ಕೆ ಹೊರಡುವ ವಿಮಾನ 03:30 ಕ್ಕೆ ಕಲಬುರಗಿ ವಿಮಾನ ನಿಲ್ದಾಣ ತಲುಪಲಿದೆ. ನಾನ್ ಸ್ಟಾಪ್ ವಿಮಾನ ಇದಾಗಿದ್ದು, ಕೇವಲ 2 ಗಂಟೆ 20 ನಿಮಿಷದಲ್ಲಿ ಕಲಬುರಗಿಯಿಂದ ದಿಲ್ಲಿಗೆ ತಲುಪಲಿದೆ. ವ್ಯಾಪಾರ ವಹಿವಾಟಕ್ಕೆ, ಉದ್ಯಮಿಗಳಿಗೆ ಈ ವಿಮಾನ ಹಾರಾಟ ಅನುಕೂಲಕರ ವಾತಾವರಣ ಸೃಷ್ಟಿಸಲಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News