ರಾಜ್ಯದಲ್ಲಿಂದು 3,014 ಮಂದಿಗೆ ಕೊರೋನ ಪಾಸಿಟಿವ್: 28 ಮಂದಿ ಮೃತ್ಯು

Update: 2020-10-31 16:13 GMT

ಬೆಂಗಳೂರು, ಅ.31: ರಾಜ್ಯದಲ್ಲಿ ಶನಿವಾರದಂದು 3,014 ಹೊಸ ಕೊರೋನ ಸೋಂಕು ಪ್ರಕರಣಗಳು ದೃಢವಾಗಿವೆ. 28 ಜನರು ಸೋಂಕಿಗೆ ಬಲಿಯಾಗಿದ್ದು, 7,468 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು 8,23,412 ಜನರಿಗೆ ಕೊರೋನ ಸೋಂಕು ತಗುಲಿದ್ದು, ಇಲ್ಲಿಯವರೆಗೆ 11,168 ಮಂದಿ ಮೃತರಾಗಿದ್ದಾರೆ. ಅನ್ಯ ಕಾರಣದಿಂದ 19 ಜನರು ಸಾವನ್ನಪ್ಪಿದ್ದಾರೆ.

ಒಟ್ಟು ಸಕ್ರಿಯ ಕೊರೋನ ಪ್ರಕರಣಗಳ ಸಂಖ್ಯೆ 55,017ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. 956 ಜನ ಕೊರೋನ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

28 ಮಂದಿ ಮೃತ್ಯು: ಬಳ್ಳಾರಿ 2, ಬೆಂಗಳೂರು ನಗರ 17, ದಕ್ಷಿಣ ಕನ್ನಡ 1, ಧಾರವಾಡ 1, ಕೋಲಾರ 1, ಮೈಸೂರು 2, ರಾಮನಗರ 1, ಶಿವಮೊಗ್ಗ 1, ತುಮಕೂರು 1, ವಿಜಯಪುರ ಜಿಲ್ಲೆಯಲ್ಲಿ ಒಬ್ಬರು ಮೃತರಾಗಿದ್ದಾರೆ.

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 3,014 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 24, ಬಳ್ಳಾರಿ 70, ಬೆಳಗಾವಿ 35, ಬೆಂಗಳೂರು ಗ್ರಾಮಾಂತರ 44, ಬೆಂಗಳೂರು ನಗರ 1,621, ಬೀದರ್ 3, ಚಾಮರಾಜನಗರ 28, ಚಿಕ್ಕಬಳ್ಳಾಪುರ 33, ಚಿಕ್ಕಮಗಳೂರು 35, ಚಿತ್ರದುರ್ಗ 59, ದಕ್ಷಿಣ ಕನ್ನಡ 95, ದಾವಣಗೆರೆ 47, ಧಾರವಾಡ 27, ಗದಗ 23, ಹಾಸನ 173, ಹಾವೇರಿ 29, ಕಲಬುರಗಿ 32, ಕೊಡಗು 17, ಕೋಲಾರ 47, ಕೊಪ್ಪಳ 8, ಮಂಡ್ಯ 89, ಮೈಸೂರು 161, ರಾಯಚೂರು 16, ರಾಮನಗರ 12, ಶಿವಮೊಗ್ಗ 18, ತುಮಕೂರು 53, ಉಡುಪಿ 49, ಉತ್ತರ ಕನ್ನಡ 24, ವಿಜಯಪುರ 122, ಯಾದಗಿರಿ ಜಿಲ್ಲೆಯಲ್ಲಿ 20 ಪ್ರಕರಣಗಳು ಪತ್ತೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News