ಸೊಸೆಯಿಂದ ಹಲ್ಲೆಗೊಳಗಾಗಿದ್ದ ಅತ್ತೆ, ಮಾವ ಸಾವು
Update: 2020-11-01 19:03 IST
ಮಂಡ್ಯ, ನ.1: ಕೆ.ಆರ್.ಪೇಟೆ ತಾಲೂಕಿನ ಹೆಮ್ಮಡಹಳ್ಳಿ ಗ್ರಾಮದಲ್ಲಿ ಸೊಸೆಯಿಂದ ಹಲ್ಲೆಗೊಳಗಾಗಿ ತೀವ್ರ ಗಾಯಗೊಂಡಿದ್ದ ಅತ್ತೆ, ಮಾವ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
15 ದಿನಗಳ ಹಿಂದೆ ಮನೆಯಲ್ಲಿ ನಿದ್ರಿಸುತ್ತಿದ್ದ ತನ್ನ ಪತಿ, ಅತ್ತೆ, ಮಾವ ಮೂವರ ಮೇಲೆ ಆರೋಪಿ ನಾಗಮಣಿ ಕಾಯಿತುರಿ ಮಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಳು ಎನ್ನಲಾಗಿದೆ.
ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಪತಿ ನಾಗರಾಜು ಸಾವನ್ನಪ್ಪಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಅತ್ತೆ ಕುಳ್ಳಮ್ಮ(60) ಹಾಗೂ ಮಾವ ವೆಂಕಟೇಗೌಡ(80) ರವಿವಾರ ಮೃತಪಟ್ಟಿದ್ದಾರೆ.
ಈ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಆರೋಪಿ ನಾಗಮಣಿಯನ್ನು ಪೊಲೀಸರು ಬಂಧಿಸಿದ್ದಾರೆ.