×
Ad

ಜಿಎಸ್‍ಟಿ ಪರಿಹಾರದ 6 ಸಾವಿರ ಕೋಟಿ ರೂ.ಬಿಡುಗಡೆ ಮಾಡಲಿರುವ ಕೇಂದ್ರ ಸರಕಾರ

Update: 2020-11-02 19:30 IST

ಬೆಂಗಳೂರು, ನ.2: ಕೇಂದ್ರ ಹಣಕಾಸು ಸಚಿವಾಲಯವು “ರಾಜ್ಯಗಳ ಜಿಎಸ್‍ಟಿ ಪರಿಹಾರ ಸೆಸ್ ಕೊರತೆಯನ್ನು ತುಂಬುವ ವಿಶೇಷ ಸಾಲ ದಡಿಯಲ್ಲಿ ಕರ್ನಾಟಕ ಸೇರಿದಂತೆ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಿಗೆ 6000 ಕೋಟಿ ರೂ.ಗಳನ್ನು ಎರಡನೇ ಹಂತವಾಗಿ ಬಿಡುಗಡೆ ಮಾಡಲಿದೆ.

ಈ ಮೊತ್ತವನ್ನು ಸರಾಸರಿ ಶೇ.4.42 ರಷ್ಟು ಬಡ್ಡಿಯಲ್ಲಿ ಪಡೆಯಲಾಗಿದೆ. ಈ ಮೊತ್ತವನ್ನು ಅದೇ ಬಡ್ಡಿದರದಲ್ಲಿ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಲಾಗುತ್ತದೆ. ಇದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಾಲ ಪಡೆಯುವ ವೆಚ್ಚಕ್ಕಿಂತ ಕಡಿಮೆಯಾಗಿದೆ. ಇದರಿಂದಾಗಿ ಅವರಿಗೆ ಲಾಭವಾಗುತ್ತದೆ. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ವಿಶೇಷ ಸಾಲದಡಿಯಲ್ಲಿ ಹಣಕಾಸು ಸಚಿವಾಲಯವು ಇದುವವರೆಗೆ 12,000 ಕೋಟಿ ರೂ.ಗಳನ್ನು ಒದಗಿಸಿದೆ.

ಇದುವರೆಗೆ 21 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು ಆಯ್ಕೆ 1 ರ ಅಡಿಯಲ್ಲಿ ವಿಶೇಷ ವಿಂಡೋವನ್ನು ಆರಿಸಿಕೊಂಡಿವೆ. ಕೇಂದ್ರ ಸರಕಾರ ಸಂಗ್ರಹಿಸಿದ ಸಾಲಗಳನ್ನು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಜಿಎಸ್ ಟಿ ಪರಿಹಾರವಾಗಿ ಬ್ಯಾಕ್-ಟು-ಬ್ಯಾಕ್ ಆಧಾರದ ಮೇಲೆ ಬಿಡುಗಡೆ ಮಾಡಲಾಗುತ್ತದೆ.

ಕರ್ನಾಟಕ, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ಒಡಿಶಾ, ತಮಿಳುನಾಡು, ತ್ರಿಪುರ, ಉತ್ತರಪ್ರದೇಶ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ದಿಲ್ಲಿ, ಜಮ್ಮು ಮತ್ತು ಕಾಶ್ಮೀರ ಮತ್ತು ಪುದುಚೇರಿಗಳಿಗೆ ಸಾಲ ಬಿಡುಗಡೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News