ಸಿಗಂದೂರು ದೇವಸ್ಥಾನ ನಿರ್ವಹಣೆಗೆ ಜಿಲ್ಲಾಡಳಿತ ರಚನೆ ಮಾಡಿರುವ ಸಲಹಾ ಸಮಿತಿಯ ರದ್ದತಿಗೆ ಆಗ್ರಹ
Update: 2020-11-02 21:28 IST
ಶಿವಮೊಗ್ಗ (ನ.2): ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನ ನಿರ್ವಹಣೆಗೆ ಜಿಲ್ಲಾಡಳಿತ ರಚನೆ ಮಾಡಿರುವ ಸಲಹಾ ಸಮಿತಿಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನೇತೃತ್ವದಲ್ಲಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ 55 ಲಕ್ಷ ಈಡಿಗ ಸಮುದಾಯದ ಜನ ಸಂಖ್ಯೆಯಿದೆ. ತಮ್ಮ ವರದಿಯಲ್ಲಿ ಸಮುದಾಯ ಸಂಘಟನೆಯನ್ನ ಅಘೋಷಿತವೆಂದು ಉಲ್ಲೇಖಿಸಲಾಗಿದೆ. ಹಾಗಾಗಿ ನೀವು ಕ್ಷಮೆ ಕೇಳಬೇಕು. ಜೊತೆಗೆ ಮೇಲುಸ್ತುವಾರಿ ಸಮಿತಿಯನ್ನ ರದ್ದುಪಡಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಮನವಿಯನ್ನ ಸ್ವೀಕರಿಸಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಪರಿಶೀಲಸುವುದಾಗಿ ತಿಳಿಸಿದರು.
ಮನವಿ ನೀಡುವ ಸಂದರ್ಭದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್, ಎಸ್.ಸಿ ರಾಮಚಂದ್ರ, ಖಾಜಾಂಚಿ ಡಿ.ದೇವಪ್ಪ, ಜೆಡಿಎಸ್ ನ ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.