×
Ad

ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಗುರುತಿಸಿಕೊಂಡ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ

Update: 2020-11-02 21:57 IST

ಮೈಸೂರು,ನ.2: ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಇದೀಗ ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.

ಅಮೆರಿಕಾದ ಸ್ಟ್ಯಾನ್ ಫೋರ್ಡ್ ವಿವಿ ಬಿಡುಗಡೆ ಮಾಡಿರುವ ವಿಶ್ವದ ಅಗ್ರಮಾನ್ಯ ವಿಜ್ಞಾನಿಗಳ ಪೈಕಿ ಪ್ರೊ.ಕೆ.ಎಸ್.ರಂಗಪ್ಪರಿಗೆ ಸ್ಥಾನ ಲಭಿಸಿದೆ. 25 ಪುಟಗಳ ಪಟ್ಟಿಯನ್ನು ಅಮೆರಿಕಾದ ವಿವಿ ಬಿಡುಗಡೆ ಮಾಡಿದ್ದು, ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪೈಕಿ ಭಾರತದ ಶೇ. 2 ರಷ್ಟು ವಿಜ್ಞಾನಿಗಳನ್ನು ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ ಪಟ್ಟಿ ಮಾಡಿತ್ತು. ಈ ಪೈಕಿ ಸಾವಯವ ರಸಾಯನಶಾಸ್ತ್ರ (ಆರ್ಗಾನಿಕ್ ಕೆಮಿಸ್ಟ್ರಿ) ವಿಭಾಗದಲ್ಲಿ ಪ್ರೊ.ಕೆ.ಎಸ್.ರಂಗಪ್ಪ ಅವರ ಸಾಧನೆ ಮತ್ತು ವಲ್ರ್ಡ್ ವೈಡ್ ರ್ಯಾಂಕಿಂಗ್‍ನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪ್ರೊ.ಕೆ.ಎಸ್.ರಂಗಪ್ಪ ಅವರ ಸಾಧನೆ ಗಣನೆಗೆ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. 

ವಲ್ರ್ಡ್ ವೈಡ್ ರ್ಯಾಂಕಿಂಗ್‍ನಲ್ಲಿ  ಪ್ರೊ.ಕೆ.ಎಸ್.ರಂಗಪ್ಪ ಅವರು 2181 ನೇ ಸ್ಥಾನದಲ್ಲಿದ್ದು, 438 ಸಂಶೋಧನಾ ಪ್ರಬಂಧಗಳನ್ನು ರ್ಯಾಂಕಿಂಗ್  ಆಯ್ಕೆ ವೇಳೆ ಪರಿಗಣನೆ ಮಾಡಲಾಗಿದೆ. ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ವಿಜ್ಞಾನ ಕ್ಷೇತ್ರದಲ್ಲಿ ಹಲವಾರು ಸಾಧನೆಗಳ ಮೂಲಕ ಮೈಲುಗಲ್ಲು ಸ್ಥಾಪನೆ ಮಾಡಿದ್ದಾರೆ. 500 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಸಂಶೋಧನಾ ಪ್ರಬಂಧಗಳನ್ನು ಪ್ರೊ.ಕೆ.ಎಸ್.ರಂಗಪ್ಪ ಮಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News